ಭಾನುವಾರ, ಆಗಸ್ಟ್ 9, 2020
22 °C
ಮಾ.31, 2020 ವಿಮಾನ ಹಾರಾಟ ಆರಂಭ

ಬೆಂಗಳೂರು-ಮ್ಯೂನಿಕ್ ‘ಲುಫ್ತಾನ್ಸಾ’ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು- ಜರ್ಮನಿಯ ಮ್ಯೂನಿಕ್ ನಗರದ ನಡುವೆ ಹೊಸದಾಗಿ ವಿಮಾನ ಹಾರಾಟ ಆರಂಭಿಸುವುದಾಗಿ ಲುಫ್ತಾನ್ಸ್ ವಿಮಾನ ಯಾನ ಸಂಸ್ಥೆ ಪ್ರಕಟಿಸಿದೆ.

ಮುಂದಿನ ವರ್ಷದ ಮಾರ್ಚ್ 31ಕ್ಕೆ ಮ್ಯೂನಿಕ್ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹಾರಾಟ ಆರಂಭವಾಗಲಿದೆ. ಬೆಂಗಳೂರಿನ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಕ್ಕೆ ಐದು ಬಾರಿ ಈ ಸೇವೆ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಈ ಹೊಸ ವಿಮಾನ ಸೇವೆಗೆ ‘ A350-900 ವಿಮಾನವನ್ನು ಬಳಕೆ ಮಾಡಲಾಗುವುದು. ಇದರಲ್ಲಿ 48 ಬ್ಯುಸಿನೆಸ್ ಕ್ಲಾಸ್ ಸೀಟ್, 21 ಪ್ರೀಮಿಯಂ ಎಕಾನಮಿ ಕ್ಲಾಸ್ ಮತ್ತು 224 ಸೀಟುಗಳು ಎಕಾನಮಿ ಕ್ಲಾಸ್ ಗೆ ಮೀಸಲಿಡಲಾಗಿದೆ.

ಈ ವಿಮಾನಯಾನದಿಂದ ಎರಡು ಮಹತ್ವದ ಸ್ಥಳೀಯ ಹಬ್‌ಗಳಾದ ಯೂರೋಪ್‌ನ ಮೇನ್ ಲ್ಯಾಂಡ್ ಮತ್ತು ದಕ್ಷಿಣ ಭಾರತದ ಪ್ರಮುಖ ನಗರ ಬೆಂಗಳೂರಿಗೆ ಈ ಹೊಸ ಸೇವೆ ನೇರ ಸಂಪರ್ಕ ಒದಗಿಸುತ್ತದೆ. ಈ ಹೊಸ ಸೇವೆಯನ್ನು ಬೆಂಗಳೂರಿಗೆ ವಿಸ್ತರಿಸುವುದರ ಮೂಲಕ ಯೂರೋಪ್‌ಗೆ ನೇರವಾಗಿ ಹೋಗಲು ಬಯಸುವ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಈಗಾಗಲೇ ಬೆಂಗಳೂರು – ಫ್ರಾಂಕ್‌ಫರ್ಟ್‌ ನಡುವೆ ಲುಫ್ತಾನ್ಸಾ ವಿಮಾನ ಸೇವೆ ಒದಗಿಸುತ್ತಿದೆ.

‘ಭಾರತದ ಐಟಿ ಮತ್ತು ಟೆಕ್ ಹಬ್ ಆದ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಇತರ ನಗರಗಳ ಜತೆ ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. ದಕ್ಷಿಣ ಭಾರತದಿಂದ ಯೂರೋಪ್ ಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು ವ್ಯಾಪಾರ ಪ್ರವಾಸದ ಉದ್ದೇಶಕ್ಕಾಗಿ ಪ್ರಯಾಣಿಸುವ ಪ್ರೀಮಿಯಂ ಟ್ರಾವೆಲ್ ಅನುಭವ ಪಡೆಯಲು ಬಯಸುತ್ತಾರೆ. ಏರುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುತ್ತೇವೆ ಎನ್ನುವ ವಿಶ್ವಾಸ ನಮಗಿದೆ’ ಎಂದು ಲುಫ್ತಾನ್ಸಾ ಗ್ರೂಫ್ ಏರ್ ಲೈನ್ಸ್ ಸಂಸ್ಥೆಯ ಸೌತ್ ಏಷ್ಯಾದ ಸೀನಿಯರ್ ಡೈರೆಕ್ಟರ್ ಸೇಲ್ಸ್ ಜಾರ್ಜ್ ಇಟ್ಟಿ ಇಲ್ ಹೇಳಿದರು.

ಬೇಡಿಕೆ ಆಧರಿಸಿ ಬೆಂಗಳೂರು ಮತ್ತು ಮ್ಯೂನಿಕ್ ನಡುವೆ ಹೆಚ್ಚುವರಿ ವಿಮಾನ ಸೇವೆಯನ್ನು ಪ್ರಾರಂಭಿಸಲು ಲುಫ್ತಾನ್ಸಾ ತೀರ್ಮಾನ ತೆಗೆದುಕೊಂಡಿತು. ಬೆಂಗಳೂರಿನ ಹೊರಗೂ ಸಂಪರ್ಕ ಕಲ್ಪಿಸುವ ಬೆಂಗಳೂರು ವಿಮಾನ ನಿಲ್ದಾಣದ ಸಾಮರ್ಥ್ಯ ಮತ್ತು ವಾಣಿಜ್ಯ ದೃಷ್ಟಿಕೋನವೂ ಈ ಹೊಸ ಸೇವೆ ಒದಗಿಸಲು ಕಾರಣವಾಗಿದೆ.

ದಕ್ಷಿಣ ಏಷ್ಯಾದಲ್ಲಿ ವ್ಯಾಪಾರ ವಿಸ್ತರಿಸುವುದು ಸಂಸ್ಥೆಯ ದೀರ್ಘಕಾಲದ ಉದ್ದೇಶವಾಗಿತ್ತು. ಅದು ಈ ಮೂಲಕ ಈಡೇರುತ್ತಿದೆ. ಇದೇ ವೇಳೆ ಚೆನ್ನೈ ಮತ್ತು ಬೆಂಗಳೂರಿನಿಂದ ಫ್ರಾಂಕ್‌ಫರ್ಟ್ ನಡುವಿನ ವಿಮಾನ ಸೇವೆಯ ಬ್ಯುಸಿನೆಸ್ ಕ್ಲಾಸ್ ಸೀಟುಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು