ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಐತಿಹಾಸಿಕ ತಾಣ: ಸಾಗರದಿ ಪಥ ತೋರುವ ದೀಪಸ್ತಂಭ

Published : 27 ಜುಲೈ 2024, 23:30 IST
Last Updated : 27 ಜುಲೈ 2024, 23:30 IST
ಫಾಲೋ ಮಾಡಿ
Comments
ದೀಪಸ್ತಂಭ ಇರುವ ಅರಬ್ಬಿ ಸಮುದ್ರದ ನಡುವಿನ ದೇವಗಡ ದ್ವೀಪ.
ದೀಪಸ್ತಂಭ ಇರುವ ಅರಬ್ಬಿ ಸಮುದ್ರದ ನಡುವಿನ ದೇವಗಡ ದ್ವೀಪ.
ದೀಪಸ್ತಂಭದ ತುದಿಯಲ್ಲಿರುವ ಪ್ರಖರ ಬೆಳಕನ್ನು ಬಹುದೂರದವರೆಗೆ ಗೋಚರಿಸಲು ಸಹಾಯಕವಾಗಬಲ್ಲ ಸ್ಫಟಿಕದ ಫಲಕ.
ದೀಪಸ್ತಂಭದ ತುದಿಯಲ್ಲಿರುವ ಪ್ರಖರ ಬೆಳಕನ್ನು ಬಹುದೂರದವರೆಗೆ ಗೋಚರಿಸಲು ಸಹಾಯಕವಾಗಬಲ್ಲ ಸ್ಫಟಿಕದ ಫಲಕ.
ದೇವಗಡ ದ್ವೀಪದಲ್ಲಿನ ಲೈಟ್‍ಹೌಸ್ ಪಕ್ಕದಲ್ಲಿ ಇರಿಸಲಾಗಿರುವ ಬ್ರಿಟಿಷ್ ಕಾಲದ ಫಿರಂಗಿ.
ದೇವಗಡ ದ್ವೀಪದಲ್ಲಿನ ಲೈಟ್‍ಹೌಸ್ ಪಕ್ಕದಲ್ಲಿ ಇರಿಸಲಾಗಿರುವ ಬ್ರಿಟಿಷ್ ಕಾಲದ ಫಿರಂಗಿ.
ಮನ ಸೆಳೆಯುವ ತಾಣ
ದೀಪಸ್ತಂಭ (ಲೈಟ್‍ಹೌಸ್) ಒಳಗೊಂಡಿರುವ ಕಾರವಾರ ಸಮೀಪದ ದೇವಗಡ ಆಕರ್ಷಣೀಯ ದ್ವೀಪ ಪ್ರದೇಶ. ಸಮುದ್ರದ ನಡುವಿನ ಈ ಸ್ಥಳದಲ್ಲಿನ ಪರಿಸರ, ಬಂಡೆಕಲ್ಲುಗಳು ನೋಡುಗರನ್ನು ಆಕರ್ಷಿಸುತ್ತವೆ. ದೀಪಸ್ತಂಭದ ಮೇಲಿನಿಂದ ನಿಂತು ನೋಡಿದರೆ ಗೋಚರಿಸುವ ದ್ವೀಪದ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಉಪ್ಪುನೀರಿನ ಸಮುದ್ರದ ನಡುವೆ ಇದ್ದರೂ ದ್ವೀಪದಲ್ಲಿ ಎರಡು ಸಿಹಿನೀರಿನ ಬಾವಿಗಳಿವೆ. ಹಿಂದೆಲ್ಲ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ದೋಣಿ ಮೂಲಕ ಭೇಟಿ ನೀಡುತ್ತಿದ್ದರು. ಆದರೆ, ಈಚಿನ ವರ್ಷಗಳಲ್ಲಿ ಇದನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಲೈಟ್‍ಹೌಸ್‍ನ ದೀಪಸ್ತಂಭದ ಮೇಲಿನಿಂದ ಕಾಣುವ ದೇವಗಡ ದ್ವೀಪ ಮತ್ತು ಅರಬ್ಬಿ ಸಮುದ್ರದ ವಿಹಂಗಮ ನೋಟ.
ಲೈಟ್‍ಹೌಸ್‍ನ ದೀಪಸ್ತಂಭದ ಮೇಲಿನಿಂದ ಕಾಣುವ ದೇವಗಡ ದ್ವೀಪ ಮತ್ತು ಅರಬ್ಬಿ ಸಮುದ್ರದ ವಿಹಂಗಮ ನೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT