ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸುತ್ತುವವರ, ಓದುವವರ ನಡುವಿನ ಕೊಂಡಿ ಕನ್ನಡ ಡಾಟ್‌ ಟ್ರಾವೆಲ್‌

Last Updated 10 ಡಿಸೆಂಬರ್ 2020, 11:43 IST
ಅಕ್ಷರ ಗಾತ್ರ
ADVERTISEMENT
""

ಜ್ಞಾನದ ಪರಿಧಿಯನ್ನು ವಿಸ್ತರಿಕೊಳ್ಳಲು ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು‘ ಅನ್ನುವ ಮಾತಿದೆ. ಆದರೆ, ಈ ದೇಶ ಸುತ್ತುವವರಿಗೂ ಮತ್ತು ಕೋಶ ಓದುವವರಿಗೂ ಒಂದೊಮ್ಮೆ ಸಮರ್ಪಕವಾದ ಸಂಪರ್ಕ ಸೇತುವೆ ಏರ್ಪಟ್ಟರೆ ಅರಿವಿನ ಹಾದಿ ಮತ್ತಷ್ಟು ಹಿಗ್ಗುತ್ತದೆ.

ಇವರೆಡರ ನಡುವೆ ಕೊಂಡಿ ಬೆಸೆಯೊದಕ್ಕಾಗಿ ಕನ್ನಡ ಡಾಟ್‌ ಟ್ರಾವೆಲ್‌ ಜಾಲತಾಣ ರೂಪುಗೊಂಡಿದೆ. ಇದರ ರೂವಾರಿ ಸುನಿಲ್‌ ಪಾಟೀಲ ಹೇಳಿಕೊಳ್ಳುವಂತೆ, ’ಸಮಯ ಸಿಕ್ಕಿದಾಗೆಲ್ಲ ಪ್ರವಾಸ ಹೊರಡುವವರ ಅನುಭವವನ್ನು ಓದಿನ ಗೀಳಿರುವವರು ತಮ್ಮದಾಗಿಸಿಕೊಳ್ಳುವ ಕಲ್ಪನೆಯೇ ಕನ್ನಡ ಡಾಟ್ ಟ್ರಾವೆಲ್‌. ಇಲ್ಲಿ ಎಲ್ಲ ಬಗೆಯ ಪ್ರವಾಸಿಗರ ಅನುಭವವನ್ನು ಓದಬಹುದು. ಸ್ಫೂರ್ತಿ ತುಂಬುವ ಕತೆಗಳಿವೆ. ಏಕಾಂಗಿಯಾಗಿ ಪ್ರಯಾಣ ಮಾಡುವವರ ರೋಚಕ ಅನುಭವಗಳು, ಬೈಕ್‌ ಮತ್ತು ಕಾರಿನಲ್ಲಿ ಎಲ್ಲೆ ಮೀರಿ ಹೊರಡುವವರ ಕಥನಗಳಿವೆ‌‘ ಎಂದು ವಿವರಿಸುತ್ತಾರೆ ಅವರು.

’ನನ್ನನ್ನು ಸೇರಿ ಯುವಸಮೂಹ ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ತಂತ್ರಜ್ಞಾನದೊಟ್ಟಿಗೆ ಇಂಗ್ಲಿಷ್‌ ತಳುಕು ಹಾಕಿಕೊಂಡಿರುವುದರಿಂದ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಕಡಿಮೆ ಇದೆ. ಅದರಲ್ಲಿ ಪ್ರವಾಸದ ಗೀಳು ಇರುವವರನ್ನು ಕನ್ನಡದಲ್ಲಿ ಬರೆಯುವಂತೆ ಪ್ರೇರೆಪಿಸುತ್ತಿದ್ದೇವೆ. ಸೋಲೋ, ಬೈಕರ್ಸ್‌, ಸೈಕಲಿಂಗ್‌, ಮೋಟಾರ್ ಡೈರೀಸ್‌, ಹೆರಿಟೇಜ್‌, ವಿದೇಶಗಳಿಗೆ ಪ್ರವಾಸ ಹೊರಡುವವರು ಹೀಗೆ ಎಲ್ಲರೂ ಇಲ್ಲಿ ಕನ್ನಡದಲ್ಲಿಯೇ ಮಾತಾಗಿದ್ದಾರೆ‘ ಎಂದು ಮಾಹಿತಿ ಹಂಚಿಕೊಂಡರು.

ಇಲ್ಲಿರುವ ಸಾಕಷ್ಟು ಅನುಭವ ಕಥನ ಪ್ರವಾಸ ಹೊರಡುವವರಿಗೆ ಒಳ್ಳೆಯ ಮಾರ್ಗದರ್ಶಿಯೂ ಆಗಬಹುದು. ಜತೆಗೆ ಕನ್ನಡದಲ್ಲಿ ಎಂದಿಗೂ ಬರೆಯದ ಪ್ರವಾಸಿಗರಿಂದ ಬರೆಸುವ ಪ್ರಯತ್ನ ಮಾಡಿದ್ದೇವೆ. ಪ್ರತಿ ಊರಿಗೂ ಆಹಾರದೊಂದಿಗೆ ಒಂದು ಅಸ್ಮಿತೆ ಇರುತ್ತದೆ. ಆಹಾರ–ವಿಹಾರದ ಮೂಲಕ ಆಯಾ ಪ್ರದೇಶಕ್ಕೆ ಭೇಟಿ ಕೊಟ್ಟವರು ಊರು ಮತ್ತು ಆಹಾರ ಎರಡನ್ನು ಮನಮಟ್ಟುವಂತೆ ಹೇಳಲು ಅವಕಾಶವಿದೆ‘ ಎಂದು ಹೇಳುತ್ತಾರೆ.

ಕನ್ನಡ ಡಾಟ್‌ ಟ್ರಾವೆಲ್‌ನ ಲೋಗೋ ಗಮನಿಸಿದರೆ, ’ಕ’ ಒಳಗೆ ಭೂಪಟವಿದೆ. ಜಗತ್ತಿನ ಆರು ಖಂಡಗಳಲ್ಲಿಯೂ ಕನ್ನಡಿಗರು ಇದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದು ಕಮ್ಯುನಿಟಿಯಾಗಿ ರೂಪುಗೊಳ್ಳಲಿದೆ. ಆಗ ಬೆಂಗಳೂರಿನ ಕನ್ನಡತಿ, ಅಮೆರಿಕದ ಕನ್ನಡತಿಯ ಸಹಾಯದೊಂದಿಗೆ ನಿರಾಂತಕವಾಗಿ ಅಮೆರಿಕವನ್ನು ನೋಡಬಹುದು‘ ಎನ್ನುವ ಯೋಜನೆ ಅವರದ್ದು.

ಎಲ್ಲೇ ಪ್ರವಾಸ ಮಾಡಿದರೂ, ಆಯಾ ಊರಿನಲ್ಲಿರುವ ಕನ್ನಡ ಕೈಗಳು ನೆರವಾಗುವ ಹಾಗೇ ಆದರೆ, ಈ ಕೆಲಸಕ್ಕೆ ಸಾರ್ಥಕತೆ ಮೂಡುತ್ತೆ ಎನ್ನುವ ಕಾಳಜಿ ಅವರದ್ದು.

ಸಾಮಾನ್ಯವಾಗಿ ಪ್ರವಾಸ ಅಂದಾಕ್ಷಣ ಬೆಟ್ಟ, ಗುಡ್ಡ ಮತ್ತು ಸಮುದ್ರ ಸುತ್ತನೇ ಇರುತ್ತೆ. ಆದರೆ ರಾಜ್ಯದ ದೇಶದ, ಪಾರಂಪರಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸ ಹೊರಡುವವರ ಸಂಖ್ಯೆ ವಿರಳ. ಆ ಕಡೆಗೂ ಹೆಚ್ಚಿನ ಗಮನ ಹರಿಸಬೇಕಿದೆ ಅಂತಾರೆ ಸುನಿಲ್‌ ಪಾಟೀಲ.

ಪ್ರವಾಸಿಗರ ಅನುಭವ ಕಥನ ತಿಳಿಯಲು https://kannada.travel ಜಾಲತಾಣಕ್ಕೆ ಭೇಟಿ ನೀಡಬಹುದು.

***

ಆರು ವರ್ಷಗಳ ಹಿಂದೆ ಪ್ರವಾಸ ಹೊರಡುವ ಹುಕಿ ಎಷ್ಟಿತ್ತೆಂದರೆ ಪಾಸ್‌ಪೋರ್ಟ್‌ ಇಲ್ಲದೇ ವಿದೇಶಕ್ಕೆ ಪ್ರಯಾಣ ಮಾಡಲು ವಿಮಾನ ಟಿಕೇಟುಗಳನ್ನು ಖರೀದಿಸಿದ್ದೆ. ಟಿಕೆಟ್‌ ಮೊದಲು ಬಂತು, ಪಾಸ್‌ಪೋರ್ಟ್‌ ಆಮೇಲೆ ಹೇಗೋ ಬಂತು. ಪಾಸ್‌ಪೋರ್ಟ್‌ ಮೊದಲೇ ಇರಬೇಕು ಅನ್ನೊ ಕನಿಷ್ಠ ಜ್ಞಾನವೂ ನನ್ನಲ್ಲಿ ಇರಲಿಲ್ಲ. ನನ್ನೂರು ಹುಬ್ಬಳ್ಳಿ. ಅನ್ಯ ರಾಜ್ಯವನ್ನು ಸರಿಯಾಗಿ ನೋಡಿದವನಲ್ಲ. ವಿಮಾನ ಟಿಕೆಟ್‌ ದರ ಕಡಿಮೆ ಇತ್ತು ಅನ್ನೊ ಒಂದೇ ಕಾರಣಕ್ಕೆ ಮೊದಲ ಬಾರಿಗೆ ಮಲೇಷ್ಯಾಗೆ ಪ್ರಯಾಣ ಬೆಳೆಸಿದ್ದೆ. ಪ್ರವಾಸ ಹೊರಡುವ ಆಸಕ್ತಿ ಎಲ್ಲರಲ್ಲೂ ಇರುತ್ತೆ. ಅಗತ್ಯವಿರುವ ಮಾಹಿತಿ ಮಾತೃಭಾಷೆಯಲ್ಲಿ ಸಿಕ್ಕಿಬಿಟ್ಟರೆ ಯೋಜನೆ ಹಾಕಲು ಸುಲಭ ಅನಿಸುತ್ತೆ.

- ಸುನಿಲ್ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT