ಜೀವವೈವಿಧ್ಯದ ದೃಷ್ಟಿಯಿಂದ ತುಂಬಾ ಮಹತ್ವವಾದ ಕೆರೆ, ಸರೋವರ, ಜಲಾಶಯ, ಅಳಿವೆಗಳನ್ನು ಗುರುತಿಸಿ ಅವುಗಳಿಗೆ ರಾಮ್‌ಸಾರ್ ಜಾಗತಿಕ ಮನ್ನಣೆಯನ್ನು ನೀಡಲಾಗುತ್ತದೆ. ಈ ಗೌರವ ಮತ್ತು ಭದ್ರತೆಗೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಕಳೆದ ವರ್ಷ ಪಾತ್ರವಾಗಿದೆ.
ಅಂಕಸಮುದ್ರ ಕೆರೆಯಲ್ಲಿ ಕೋಂಬ್ ಡಕ್
ಪಕ್ಷಿವೀಕ್ಷಣೆಯಲ್ಲಿ ತೊಡಗಿರುವ ವಿದೇಶಿಯರು
ಸಹಸ್ರಾರು ಸಂಖ್ಯೆಯಲ್ಲಿರುವ ಪೇಂಟೆಡ್ ಸ್ಟಾರ್ಕ್ ಕಾರ್ಮೋರೆಂಟ್ ಗ್ಲೋಸಿ ಐಬೀಸ್ ಪಕ್ಷಿಗಳನ್ನು ನೋಡುವುದೇ ಚಂದ. ಇಷ್ಟು ಸಂಖ್ಯೆಯ ಬಾನಾಡಿಗಳನ್ನು ಬೇರೆಲ್ಲೂ ನೋಡಿಲ್ಲ ಇದೊಂದು ಅದ್ಭುತ ತಾಣ.