ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮೋಸ್‌ಗೆ ಸಿಗಲಿದೆ ಹೈಪರ್‌ಸಾನಿಕ್‌ ವೇಗ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಯೋಜನೆಯಂತೆ ಎಲ್ಲವೂ ನಡೆದರೆ ಸದ್ಯ ಇರುವ ಸೂಪರ್‌ಸಾನಿಕ್ ವೇಗದ ಬ್ರಹ್ಮೋಸ್ ಕ್ಷಿಪಣಿಗಳು ಮುಂದಿನ ಹತ್ತು ವರ್ಷಗಳಲ್ಲಿ ಹೈ‍ಪರ್‌ಸಾನಿಕ್ ವೇಗವನ್ನು ಪಡೆದುಕೊಳ್ಳಲಿವೆ.

‘ಕ್ಷಿಪಣಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಹಂತ ಹಂತವಾಗಿ ಪ್ರಯೋಗ ನಡೆಸುತ್ತಿದ್ದೇವೆ’ ಎಂದು ಬ್ರಹ್ಮೋಸ್ ಏರೋಸ್ಪೇಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾ‍ಪಕ ನಿರ್ದೇಶಕ ಸುಧೀರ್ ಕುಮಾರ್ ಮಿಶ್ರಾ ಹೇಳಿದ್ದಾರೆ.

‘ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸಿದ್ದೇ ಒಂದು ಸವಾಲು. ಅದನ್ನು ನಾವು ಸಾಧಿಸಿದ್ದೇವೆ. ಈಗ ಅಗತ್ಯಗಳಿಗೆ ತಕ್ಕಂತೆ ಅದನ್ನು ಮೇಲ್ದರ್ಜೆಗೆ ಏರಿಸುತ್ತೇವೆ’ ಎಂದು ಗೋಡ್ರೆಜ್ ಆಂಡ್‌ ಬಾಯ್ಸ್ ನಿರ್ಮಾಣ ಕಂಪೆನಿಯ ಅಧ್ಯಕ್ಷ ಜೆ.ಎನ್‌.ಗೋಡ್ರೆಜ್ ಅವರು ಹೇಳಿದ್ದಾರೆ.

ಗೋಡ್ರೆಜ್ ಏರೋಸ್ಪೇಸ್‌ನಿಂದ ನೂರನೇ ಬ್ರಹ್ಮೋಸ್ ಕ್ಷಿಪಣಿಯನ್ನು ಪಡೆದ ನಂತರ ಮಿಶ್ರಾ ಅವರು ಮಾಧ್ಯಮದೊಂದಿಗಿನ ಸಂವಹನದಲ್ಲಿ ಭಾಗವಹಿಸಿದರು.

‘ಬ್ರಹ್ಮೋಸ್ ಕ್ಷಿಪಣಿಯ ಸದ್ಯದ ವೇಗ ಪ್ರತಿ ಗಂಟೆಗೆ 2.8 ಮ್ಯಾಕ್ (3457.44 ಕಿ.ಮೀ). ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಇದನ್ನು 3.5 ಮ್ಯಾಕ್‌ಗೆ (4321.8 ಕಿ.ಮೀ) ಹೆಚ್ಚಿಸಲಾಗುತ್ತದೆ ಹಾಗೂ ನಂತರದ ಮೂರ್ನಾಲ್ಕು ವರ್ಷಗಳಲ್ಲಿ 5 ಮ್ಯಾಕ್‌ಗೆ (6174 ಕಿ.ಮೀ) ಹೆಚ್ಚಿಸುವ ಗುರಿ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT