ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆಕಾಯಿ ಕೆ.ಜಿ.ಗೆ ₹ 10 ಇಳಿಕೆ

Last Updated 2 ಜನವರಿ 2018, 9:14 IST
ಅಕ್ಷರ ಗಾತ್ರ

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ ₹ 50ಕ್ಕೆ ಮಾರಾಟವಾಗುತ್ತಿದ್ದ ಅವರೆಕಾಯಿ ಈ ವಾರ ₹ 40ಕ್ಕೆ ಮಾರಾಟವಾಗುತ್ತಿದ್ದು, ₹ 10 ಇಳಿಕೆಯಾಗಿದೆ. ಬೆಂಗಳೂರು, ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರದಿಂದ ಹಾಸನದ ಮಾರುಕಟ್ಟೆಗೆ ಅವರೆಕಾಯಿ ಬರುತ್ತದೆ.

ಅವರೆಕಾಯಿ ಸಾಮಾನ್ಯವಾಗಿ ಎಲ್ಲರೂ ಇಷ್ಟ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ. ಇದರಿಂದ ಆವರೆಕಾಯಿ ರುಚಿ ಆಸ್ವಾಧಿಸುವವರಿಗೆ ಖುಷಿಯಾಗಿದೆ. ಆದರೆ, ರೈತನಿಗೆ ತುಸು ನಷ್ಟ ಉಂಟಾಗಿದೆ.

ಟೊಮೆಟೊ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ₹ 10ಕ್ಕೆ ಒಂದು, ಒಂದೂವರೆ ಕೆ.ಜಿ ಮಾರಾಟ ಮಾಡಲಾಗುತ್ತಿದೆ. ಮೂಸಂಬೆ ಕಳೆದ ವಾರ ಕೆಜಿಗೆ ₹ 70ಕ್ಕೆ ಮಾರಾಟವಾಗುತ್ತಿದ್ದು, ಈ ವಾರ ₹ 10 ಕುಸಿತವಾಗಿದೆ. ಒಂದು ಕೆ.ಜಿ ಬಾಳೆಹಣ್ಣು ಕಳೆದ ವಾರ ₹ 60ಕ್ಕೆ ಮಾರಾಟವಾಗುತ್ತಿದ್ದು, ಈ ವಾರ ₹ 10 ಕಡಿಮೆಯಾಗಿದೆ. ಉಳಿದಂತೆ ಹಣ್ಣುಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಬೀನ್ಸ್‌ ಕೆ.ಜಿ.ಗೆ ₹ 40, ಕೆ.ಜಿ ಆಲೂಗೆಡ್ಡೆಗೆ ₹ 20, ಕ್ಯಾರೆಟ್‌ ಕೆ.ಜಿ.ಗೆ ₹ 60, ಹಾಗಲಕಾಯಿ ಕೆ.ಜಿಗೆ ₹ 40, ಈರುಳ್ಳಿ ಕೆ.ಜಿ.ಗೆ ₹ 35, ದಪ್ಪ ಮೆಣಸಿನ ಕಾಯಿ ಕೆ.ಜಿಗೆ ₹ 60, ಕೆ.ಜಿ. ನುಗ್ಗೆಕಾಯಿ ₹ 100, ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 10 ರಂತೆ ಮಾರಾಟವಾಗುತ್ತಿದೆ.

ಸೇಬು ಕೆ.ಜಿ ಗೆ ₹ 100, ಸೀತಾಫಲ ಕೆ.ಜಿಗೆ ₹ 100, ಕಿತ್ತಳೆಹಣ್ಣು ಕೆ.ಜಿಗೆ. ₹ 60 ಅನಾನಸ್‌ ಕೆ.ಜಿ.ಗೆ ₹ 100, ಕೆ.ಜಿ ದ್ರಾಕ್ಷಿಗೆ ₹ 180, ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣು ಕೆ.ಜಿ ಗೆ ₹ 30, ಸಪೋಟ ಕೆ.ಜಿ.ಗೆ ₹ 100ಕ್ಕೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT