ಕೊಪ್ಪಳ: 'ಇದು ಮಹಾಜನ ಸಾಗರ, ಜನಜಾತ್ರೆ ಈ ದೇಶದ ಅತ್ಯದ್ಭುತ. ಒಡಿಶಾದ ಪುರಿ ಜಗನ್ನಾಥ ಜಾತ್ರೆಯನ್ನೂ ಮೀರಿಸಿದೆ... ಇದು ವಿಜ್ಞಾನಿ, ಭಾರತ ರತ್ನ ಪುರಸ್ಕೃತ ಪ್ರೊ.ಸಿ.ಎನ್.ಆರ್. ರಾವ್ ಅವರು ಜಾತ್ರಾ ಮಹೋತ್ಸವವನ್ನು ಕಂಡು ಉದ್ಗರಿಸಿದ ರೀತಿ. ಈ ಹಿಂದೆ ರಥೋತ್ಸವ ಉದ್ಘಾಟಿಸಿದ ಅವರು ಜನಸಾಗರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು.

ಶ್ರೀಗವಿಮಠದ ಭವ್ಯ ಪರಂಪರೆಯಲ್ಲಿ ಸಾಗಿ ಬಂದ ಗವಿಸಿದ್ದೇಶ್ವರ ಸ್ವಾಮೀಜಿ ಅನೇಕ ಜನಪರ ಕಾರ್ಯಗಳನ್ನು, ಸಮಾಜೋಧಾರ್ಮಿಕ ಕಾರ್ಯಗಳನ್ನು ಮಾಡಿದ್ದಾರೆ. ಅನ್ನ, ಅಕ್ಷರ, ಅಧ್ಯಾತ್ಮದಂತಹ ತ್ರಿವಿಧ ದಾಸೋಹಗಳನ್ನು ತಮ್ಮ ನಿರಂತರ ಕಾಯಕವನ್ನಾಗಿ ಮಾಡಿಕೊಂಡು ಬಂದರು. ಶ್ರೀಗವಿಮಠದ ಭವ್ಯ ಪರಂಪರೆಯಲ್ಲಿ ಸಾಗಿಬಂದ 16ನೇ ಪೀಠಾಧೀಶ ಮರಿಶಾಂತವೀರ ಶಿವಯೋಗಿ ಅವರು 1951ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ತನ್ಮೂಲಕ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು. ಹಾಲಿ ಪೀಠಾಧೀಶ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮಠದ ಸೇವಾ ಪರಂಪರೆಯನ್ನು ಮುಂದುವರಿಸಿದ್ದಾರೆ.

ಅನ್ನದಾಸೋಹ ವಿಶೇಷ: ಜಾತ್ರೆಗೆ ಬರುವ ಜನಸ್ತೋಮಕ್ಕೆ ನಿತ್ಯ ದಾಸೋಹವಂತೂ ಇದ್ದೇ ಇದೆ. ವೈವಿಧ್ಯಮಯ ಪ್ರಸಾದ ವ್ಯವಸ್ಥೆಯೂ ಇರುತ್ತದೆ. ಕೇವಲ ಪ್ರಸಾದ ವ್ಯವಸ್ಥೆಯಲ್ಲದೇ ಧಾರ್ಮಿಕ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯ ಕ್ರಮ ಗಳು ಮನಸ್ಸಿನ ಹಸಿವನ್ನು ಇಂಗಿಸುತ್ತದೆ.

ಜಾತ್ರೆ ಒಂದಲ್ಲ ಒಂದು ಪರಿಕಲ್ಪನೆಯ ಅಡಿ ನಡೆಯುತ್ತಿದೆ. ಕಳೆದ ಬಾರಿ ಜಲದೀಕ್ಷೆ ಯಾತ್ರೆ ಸಂಬಂಧಿಸಿ ಗಮನ ಸೆಳೆದಿದ್ದ ಮಠ ಈ ಬಾರಿ ಒತ್ತಡರಹಿತ ಬದುಕಿನೆಡೆ ಎಂಬ ಬೃಹತ್ ಜಾಗೃತಿ ಜಾಥಾ ನಡೆಸಿದೆ.

ರಥೋತ್ಸವ, ಜಾತ್ರೆ ಆರಂಭವಾದ ಬಗೆ: ಒಂದು ಸಂದರ್ಭದಲ್ಲಿ ಮಠದ 10ನೇ ಪೀಠಾಧಿಪತಿ, ಚನ್ನಬಸವ ಸ್ವಾಮೀಜಿ ಅವರು ಗವಿಸಿದ್ಧೇಶ್ವರರನ್ನು ಕುರಿತು 'ನಾನು ಬಂದ ಕಾರ್ಯ ಮುಗಿಯಿತು, ಜಗದ ಜೀವಿಗಳ ರಕ್ಷಣೆ ಇನ್ನೂ ಮೇಲೆ ನಿನ್ನ ಹೆಗಲ ಮೇಲಿದೆ, ಸುಖದಿಂದ ಲಿಂಗದೊಳು ಬೆರೆಯುವೆ' ಎಂದರು.

ಗುರುಗಳ ನುಡಿ ಕೇಳಿದ ಗವಿಸಿದ್ಧೇಶ್ವರರಿಗೆ ಕಣ್ಣೀರು ಬಂದಿತು. ಗುರುಗಳ ಅಗಲಿಕೆಯನ್ನು ಸಹಿಸಲಾಗದೆ ಗುರುಗಳಿಗಾಗಿಯೇ ತಯಾರಿಸಿದ್ದ ಸಮಾಧಿಯನ್ನೇರಿ ಲಿಂಗಪೂಜೆಯೊಳಗೇ ನಿರತರಾಗಿ ಅದರ ಬೆಳಕಿನಲ್ಲೇ ಲೀನರಾದರು. ಈ ಘಟನೆ ನಡೆದದ್ದು ಕ್ರಿ.ಶ. 1816ರಲ್ಲಿ. ಗುರು ಚನ್ನಬಸವಸ್ವಾಮೀಜಿ ಅವರೇ ಗವಿಸಿದ್ದೇಶ್ವರರ ಸಂಸ್ಕಾರ ನೆರವೇರಿಸಿದರು. ಗುರುಗಳಿಂದಲೇ ಗೌರವಿಸಿಕೊಂಡ ಸಜೀವ ಸಮಾಧಿಯಾದ ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಯ ಜಾತ್ರಾ ಮಹೋತ್ಸವ ಅಂದಿನಿಂದ ಇಂದಿನವರೆಗೂ ಜರುಗುತ್ತಾ ಬಂದಿದೆ.

ರಥೋತ್ಸವ, ಜಾತ್ರೆ ಆರಂಭವಾದ ಬಗೆ...

ಒಂದು ಸಂದರ್ಭದಲ್ಲಿ ಮಠದ 10ನೇ ಪೀಠಾಧಿಪತಿ, ಚನ್ನಬಸವ ಸ್ವಾಮೀಜಿ ಅವರು ಗವಿಸಿದ್ಧೇಶ್ವರರನ್ನು ಕುರಿತು 'ನಾನು ಬಂದ ಕಾರ್ಯ ಮುಗಿಯಿತು, ಜಗದ ಜೀವಿಗಳ ರಕ್ಷಣೆ ಇನ್ನೂ ಮೇಲೆ ನಿನ್ನ ಹೆಗಲ ಮೇಲಿದೆ, ಸುಖದಿಂದ ಲಿಂಗದೊಳು ಬೆರೆಯುವೆ' ಎಂದರು.

ಇದು ನಿಜಕ್ಕೂ ಜನಮನ ಮೆಚ್ಚುವ ಸಮಾಜಮುಖಿ ಚಿಂತನೆಯ ಜಾತ್ರೆ ಎಂಬುದರಲ್ಲಿ ಎರಡು ಮಾತಿಲ್ಲ
- ಎಸ್.ಎಂ. ಕಂಬಾಳಿಮಠ, ನಿವೃತ್ತ ಶಿಕ್ಷಕ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.