ಜಗತ್ತಿನ ಎಲ್ಲ ಕಂಪ್ಯೂಟರ್‌ಗಳಲ್ಲಿ ಸುರಕ್ಷತಾ ದೋಷ ಪತ್ತೆ

7

ಜಗತ್ತಿನ ಎಲ್ಲ ಕಂಪ್ಯೂಟರ್‌ಗಳಲ್ಲಿ ಸುರಕ್ಷತಾ ದೋಷ ಪತ್ತೆ

Published:
Updated:
ಜಗತ್ತಿನ ಎಲ್ಲ ಕಂಪ್ಯೂಟರ್‌ಗಳಲ್ಲಿ ಸುರಕ್ಷತಾ ದೋಷ ಪತ್ತೆ

ಸ್ಯಾನ್‌ ಫ್ರಾನ್ಸಿಸ್ಕೊ: ಜಗತ್ತಿನ ಎಲ್ಲ ಕಂಪ್ಯೂಟರ್‌ಗಳ ಮೈಕ್ರೋಪ್ರೊಸೆಸರ್‌ಗಳಲ್ಲಿ ಎರಡು ಪ್ರಮುಖ ಸುರಕ್ಷತಾ ದೋಷ ಇರುವುದನ್ನು ಕಂಪ್ಯೂಟರ್‌ ಸುರಕ್ಷತಾ ತಜ್ಞರು ಪತ್ತೆ ಮಾಡಿದ್ದಾರೆ.

ಮೆಲ್ಟ್‌ಡೌನ್‌ ಹಾಗೂ ಸ್ಪೆಕ್ಟರ್‌ ಎಂಬ ಎರಡು ಸಮಸ್ಯೆಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಮಾಹಿತಿಯನ್ನು ಕದಿಯಬಹುದು. ಕಂಪ್ಯೂಟರ್‌ ಮಾತ್ರವಲ್ಲದೆ ಮೊಬೈಲ್‌ ಹಾಗೂ ಕ್ಲೌಡ್‌ ಕಂಪ್ಯೂಟರ್‌ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸರ್ವರ್‌ಗಳಿಂದಲೂ ಮಾಹಿತಿ ಕದಿಯಲು ಸಾಧ್ಯ ಎಂದು ಸಂಶೋಧಕರು ತಿಳಿಸಿರುವುದಾಗಿ ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. 

ಸಂಶೋಧಕರ ಪ್ರಕಾರ ಸ್ಪೆಕ್ಟರ್‌ ಸಮಸ್ಯೆ ಪರಿಹರಿಸಲು ಇಡೀ ಪ್ರೊಸೆಸರ್‌ಗಳ ವಿನ್ಯಾಸವನ್ನೇ ಬದಲಿಸಬೇಕಾದ ಅಗತ್ಯವಿದೆ. ಸಾಫ್ಟ್‌ವೇರ್‌ ಮೂಲಕ ಮೆಲ್ಟ್‌ಡೌನ್‌ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಇದರಿಂದಾಗಿ ಆನ್‌ಲೈನ್‌ ಡೌನ್‌ಲೋಡ್‌ ಸೇರಿ ಕಂಪ್ಯೂಟರ್‌ ಕಾರ್ಯನಿರ್ವಹಿಸುವ ವೇಗ ಶೇ 30ರಷ್ಟು ತಗ್ಗಲಿದೆ.

ಕ್ಲೌಡ್‌ ಕಂಪ್ಯೂಟಿಂಗ್‌ ಸೇವೆಯಲ್ಲಿ ಮೆಲ್ಟ್‌ಡೌನ್‌ ಸಮಸ್ಯೆ ಪ್ರಮುಖವಾಗಿ ಕಾಡುವಂತದಾಗಿದೆ. ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆ ಪರಿಷ್ಕರಿಸಿರುವುದಾಗಿ ತಿಳಿಸಿವೆ.

ಇಂಟೆಲ್‌ ಸಂಸ್ಥೆಯ ಮೈಕ್ರೋಪ್ರೊಸೆಸರ್‌ಗಳಲ್ಲಿ ಮೆಲ್ಟ್‌ಡೌನ್‌ ಸಮಸ್ಯೆ ಇದೆ. ಆದರೆ, ಸ್ಪೆಕ್ಟರ್‌ ಎಲ್ಲ ಸಂಸ್ಥೆಗಳ ಪ್ರೊಸೆಸರ್‌ಗಳಲ್ಲಿಯೂ ಕಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry