"ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರಲಿ'

7

"ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರಲಿ'

Published:
Updated:

ಬ್ಯಾಡಗಿ: ‘ವಿಶ್ವ ಪ್ರಸಿದ್ಧ ಸಾಹಿತಿಗಳು, ಸಂತರು ಹುಟ್ಟಿದ ನಮ್ಮ ಜಿಲ್ಲೆಯಲ್ಲಿ ಕನ್ನಡದ ಕಂಪನ್ನು ಬೀರುವ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು. ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ ಮಾತನಾಡಿ, ತಾಲ್ಲೂಕಿನ ಎಲ್ಲ ಕನ್ನಡಾಭಿಮಾನಿಗಳ ಸಹಕಾರದಿಂದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಯಿತು. ಕನ್ನಡ ಬಗ್ಗೆ ಪ್ರೀತಿ, ಕಾಳಹಿ ಸದಾ ಹೀಗೆಯೇ ಮುಂದುವರೆಯಬೇಕು ಎಂದರು. ಸಮ್ಮೇಳದ ಅಧ್ಯಕ್ಷ ಡಾ.ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ತಾಲ್ಲೂಕಿನ ಕವಿಗಳ ಹಾಗೂ ಲೇಖಕರ ವಿಳಾಸ ಹೊತ್ತಿಗೆಯನ್ನು ಹೊರತರಲು ಉದ್ದೇಶಿಸಲಾಗಿದೆ ಎಂದರು.

ಸಾಧಕರಿಗೆ ಸನ್ಮಾನ:ರಾಜಶೇಖರಯ್ಯ ಹಾಲೇವಾಡಿಮಠ, ಡಾ.ಎಸ್‌.ಎಸ್‌.ಶಿರಗೇರಿ, ಹೇಮಲತಾ ಆಸಾದಿ (ಶಿಕ್ಷಣ), ಜೀವರಾಜ ಛತ್ರದ (ಸಾಹಿತ್ಯ), ಈರಣ್ಣ ಬೈರಾಪುರ (ಸಂಗೀತ), ಮಹಾದೇವಕ್ಕ ಲಿಂಗದಹಳ್ಳಿ (ಕೃಷಿ), ಪಾಂಡುರಂಗ ಸುತಾರ, ಮಂಜುನಾಥ ಪೂಜಾರ (ಸಾಮಾಜ ಸೇವೆ), ಎಸ್‌.ಟಿ.ನಾಗಣ್ಣನವರ (ಕುಸ್ತಿ), ನಾರಾಯಣಪ್ಪ ದೇವಗಿರಿ (ರಂಗಭೂಮಿ), ದ್ರಾಕ್ಷಾಯಣಿ ಹರಮಗಟ್ಟಿ(ಮಹಿಳಾ ಸಂಘಟನೆ), ಶಂಕ್ರಗೌಡ ಪಾಟೀಲ (ಮಾಜಿ ಸೈನಿಕ), ಡಾ.ಎಸ್‌.ಎಸ್‌.ಚೂರಿ, ಡಾ.ವಿ.ಎಂ.ಪೂಜಾರ (ವೈದ್ಯಕೀಯ) ಹಾಗೂ ಗುತ್ತೆವ್ವ ದೊಡ್ಮನಿ (ಪೌರಕಾರ್ಮಿಕ) ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಉಪಾಧ್ಯಕ್ಷ ಸುರೇಶ ಆಸಾದಿ, ಗೌರವ ಕಾರ್ಯದರ್ಶಿ ಎಸ್‌.ಪಿ.ಮಠದ, ಐ.ಬಿ.ಮುದಿಗೌಡ್ರ, ಕೋಶಾಧ್ಯಕ್ಷ ಎಂ.ಜೆ.ಪಾಟೀಲ, ಮಂಜುನಾಥ ಶಿರವಾಡಕರ, ವೀರಭದ್ರಗೌಡ ಹೊಮ್ಮರಡಿ, ಮಂಜುನಾಥ ಭೋವಿ, ರಾಜಶೇಖರ ಹೊಸಳ್ಳಿ, ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಎನ್‌.ಎಫ್‌.ಹರಿಜನ, ಹೇಮಂತ ಸರ್ವಂದ, ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ಜೀತೆಂದ್ರ ಸುಣಗಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry