ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕಿಂಗ್‌ ಸ್ಟಾರ್‌ಗೆ ಮೂವತ್ತೊಂದು

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವ ನಟ ಯಶ್‌ ಅಲಿಯಾಸ್‌ ನವೀನ್‌ ಕುಮಾರ್‌ ಗೌಡ (ಜನನ: ಜ.8, 1986). ಹಾಸನದಲ್ಲಿ ಜನಿಸಿದ ಯಶ್ ರಂಗಭೂಮಿಯ ಮೂಲಕ ಅಭಿನಯ ಜಗತ್ತಿಗೆ ಬಂದವರು. ‘ನಂದಗೋಕುಲ’, ‘ಮಳೆಬಿಲ್ಲು’, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳ ಮೂಲಕ ಜನರ ಮೆಚ್ಚುಗೆ ಗಳಿಸಿದರು. 2007ರಲ್ಲಿ ತೆರೆಕಂಡ ‘ಜಂಬದ ಹುಡುಗಿ’ ಚಿತ್ರದಲ್ಲಿ ಎರಡನೇ ನಾಯಕನಾಗಿ ಕಾಣಿಸಿಕೊಂಡರು. 2008ರಲ್ಲಿ ‘ಮೊಗ್ಗಿನ ಮನಸು’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡ ನಂತರ ಯಶ್‌ ಹಿಂತಿರುಗಿ ನೋಡಿದ್ದೇ ಇಲ್ಲ. ಸಿನಿ ಜಗತ್ತಿನಲ್ಲಿ ಅವರ ಗ್ರಾಫ್‌ ಏರುತ್ತಲೇ ಸಾಗಿತು.

‘ಮೊದಲಸಲ’, ‘ಕಿರಾತಕ’, ‘ಡ್ರಾಮಾ’, ‘ರಾಕಿ’, ‘ಗೂಗ್ಲಿ’, ‘ರಾಜಾಹುಲಿ’, ‘ಗಜಕೇಸರಿ’, ‘ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಚಾರಿ’ ಹೀಗೆ ಅವರು ಅಭಿನಯಿಸಿದ ಚಿತ್ರಗಳೆಲ್ಲಾ ಸಿನಿರಸಿಕರ ಮನಗೆದ್ದವು. ವರ್ಷದ ಹಿಂದಷ್ಟೇ ನಟಿ ರಾಧಿಕಾ ಪಂಡಿತ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮೊಗ್ಗಿನ ಮನಸ್ಸು, ಗೂಗ್ಲಿ ಹಾಗೂ ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಚಾರಿ ಚಿತ್ರದ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

ಕೊಪ್ಪಳ ಜಿಲ್ಲೆ ತಲ್ಲೂರು ಗ್ರಾಮದ ಕೆರೆಯ ಹೂಳೆತ್ತುವ ಮೂಲಕ ಸಮಾಜಸೇವೆಯಲ್ಲಿಯೂ ತಮ್ಮ ಛಾಪು ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT