ಮದರಸಾಗಳಲ್ಲಿ ಮೋದಿ ಭಾವಚಿತ್ರ ಹಾಕುವುದು ಶರಿಯಾಗೆ ವಿರುದ್ಧವಾದುದು: ಮುಫ್ತಿ ಅರ್ಷದ್‌ ಫರೂಕಿ

7

ಮದರಸಾಗಳಲ್ಲಿ ಮೋದಿ ಭಾವಚಿತ್ರ ಹಾಕುವುದು ಶರಿಯಾಗೆ ವಿರುದ್ಧವಾದುದು: ಮುಫ್ತಿ ಅರ್ಷದ್‌ ಫರೂಕಿ

Published:
Updated:
ಮದರಸಾಗಳಲ್ಲಿ ಮೋದಿ ಭಾವಚಿತ್ರ ಹಾಕುವುದು ಶರಿಯಾಗೆ ವಿರುದ್ಧವಾದುದು: ಮುಫ್ತಿ ಅರ್ಷದ್‌ ಫರೂಕಿ

ನವದೆಹಲಿ: ‘ಮದರಸಾಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕುವುದು ಶರಿಯಾಗೆ ವಿರುದ್ಧವಾದುದು’ ಎಂದು ದರುಲ್ ಉಲೂಮ್‌ ಫತ್ವಾ ವಿಭಾಗದ ಮುಖ್ಯಸ್ಥ ಮುಫ್ತಿ ಅರ್ಷದ್‌ ಫರೂಕಿ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಎಂಬ ಉತ್ತರಾಖಂಡ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮುಫ್ತಿ, ‘ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರ ಹಾಕುವ ಆದೇಶ ಈವರೆಗೂ ಇರಲಿಲ್ಲ. ಇಂತಹ ಆದೇಶ ಈಗೇಕೆ?’ ಎಂದಿದ್ದಾರೆ.

‘ಯಾವುದೇ ಆದೇಶ ಹೊರಡಿಸುವ ಮುನ್ನಾ ಶರಿಯಾ ಬಗ್ಗೆ ಸರ್ಕಾರ ಯೋಚಿಸಬೇಕು. ಇಂತಹ ಆದೇಶಗಳು ಮುಸ್ಲಿಮರ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ’ ಎಂದು ಮುಫ್ತಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry