ಪ್ರಕಾಶ್‌ ರೈ ‘ದೊಡ್ಡ ನಮಸ್ಕಾರ’ಕ್ಕೆ ‘ದೀರ್ಘದಂಡ ನಮಸ್ಕಾರ’ ಹೇಳಿದ ಜಗ್ಗೇಶ್‌

7

ಪ್ರಕಾಶ್‌ ರೈ ‘ದೊಡ್ಡ ನಮಸ್ಕಾರ’ಕ್ಕೆ ‘ದೀರ್ಘದಂಡ ನಮಸ್ಕಾರ’ ಹೇಳಿದ ಜಗ್ಗೇಶ್‌

Published:
Updated:
ಪ್ರಕಾಶ್‌ ರೈ ‘ದೊಡ್ಡ ನಮಸ್ಕಾರ’ಕ್ಕೆ ‘ದೀರ್ಘದಂಡ ನಮಸ್ಕಾರ’ ಹೇಳಿದ ಜಗ್ಗೇಶ್‌

ಬೆಂಗಳೂರು: ‘ನನ್ನ ನೇರ ನುಡಿ ಭವಿಷ್ಯ ಅವರಿಗೆ ಅರ್ಥವಾಗಲಿಲ್ಲಾ ದೌರ್ಭಾಗ್ಯ’ ಎಂದಿರುವ ನಟ ಜಗ್ಗೇಶ್‌ ಟ್ವಿಟರ್‌ನಲ್ಲಿ ಪ್ರಕಾಶ್‌ ರೈ ಅವರಿಗೆ ದೀರ್ಘದಂಡ ನಮಸ್ಕಾರ ಹೇಳಿದ್ದಾರೆ.

ಜಗ್ಗೇಶ್‌ ಟ್ವೀಟ್‌ಗಳಲ್ಲಿ ಬಳಸಿರುವ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿ 'ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ... ನಿಮಗೊಂದು ದೊಡ್ಡ  ನಮಸ್ಕಾರ’  ಎಂದು ಪ್ರಕಾಶ್‌ ರೈ ಸೋಮವಾರ ಟ್ವೀಟಿಸಿದ್ದರು. ಈ ಕುರಿತಾದ ವರದಿಯೊಂದಿಗೆ ಟ್ವೀಟಿಗರೊಬ್ಬರು ಜಗ್ಗೇಶ್‌ ಮತ್ತು ಪ್ರಕಾಶ್‌ ರೈ ಅವರ ಹೆಸರನ್ನು ಟ್ಯಾಗ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್‌, ‘ನನ್ನ ಬದುಕು ನನ್ನದು, ನನಗೆ ಹಣ ಹೆಸರಿಗಿಂತ ಪ್ರಾಮಾಣಿಕವಾಗಿ ಬದುಕಲು ಇಷ್ಟಪಡುವೆ, ನನ್ನಗುಣ ಹಿಡಿಸಿದವರು ಒಪ್ಪುತ್ತಾರೆ, ಇಷ್ಟವಾಗದವರು ದೂರ ಉಳಿಯುತ್ತಾರೆ. ನಾಳೆ ನಮ್ಮ ಹೆಸರುದುಡ್ಡು ನಶ್ವರ...ಸತ್ತಾಗ ಕಳಚುವರು ಉಡುದಾರ. ಇದು ಬದುಕಿನಸಾರ! ನಿಮಗೆ ದೀರ್ಘದಂಡ ನಮಸ್ಕಾರ!’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry