ದೆಹಲಿಯಲ್ಲಿ ದೂಳು ಬಿರುಗಾಳಿ, ಮಳೆ ಅಬ್ಬರ; ಧರೆಗುರುಳಿದ ಮರಗಳು

4

ದೆಹಲಿಯಲ್ಲಿ ದೂಳು ಬಿರುಗಾಳಿ, ಮಳೆ ಅಬ್ಬರ; ಧರೆಗುರುಳಿದ ಮರಗಳು

Published:
Updated:
ದೆಹಲಿಯಲ್ಲಿ ದೂಳು ಬಿರುಗಾಳಿ, ಮಳೆ ಅಬ್ಬರ; ಧರೆಗುರುಳಿದ ಮರಗಳು

ನವದೆಹಲಿ: ದೆಹಲಿಯಲ್ಲಿ ಭಾನುವಾರ ಸಂಜೆ ದೂಳು ಬಿರುಗಾಳಿಯೆದ್ದ ಬೆನ್ನಲ್ಲೇ ಭಾರೀ ಮಳೆ ಸುರಿದಿದ್ದು, ಮರಗಳು ಧರೆಗುರುಳಿವೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು  ಸಂಚಾರ ಅಸ್ತವ್ಯಸ್ತವಾಗಿದೆ.

ಉತ್ತರ ಭಾರತದಲ್ಲಿ ದೂಳು ಬಿರುಗಾಳಿಯ ಸಾದ್ಯತೆ ಇದೆ ಎಂದು ನಿನ್ನೆಯೇ ಎಚ್ಚರಿಕೆ ನೀಡಲಾಗಿತ್ತು. ಇದೀಗ ಈ ಭಾಗದಲ್ಲಿ ಬಿರುಗಾಳಿಯ ವೇಗ ಗಂಟೆಗೆ 50 ಕಿಮೀ- 70ಕಿಮೀ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೀಗ ವಿಮಾನ ಯಾನವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕನಿಷ್ಟ 10 ವಿಮಾನಗಳನ್ನು ಬೇರೆ ದಾರಿಯಗಿ ಕಳುಹಿಸಲಾಗಿದೆ. ದೆಹಲಿ ಮೆಟ್ರೊ ಸೇವೆಗೂ ಅಡಚಣೆಯುಂಟಾಗಿದೆ.

ಸಂಜೆ 5 ಗಂಟೆಯ ಹೊತ್ತಿಗೆ ಉರಿ ಬಿಸಿಲಿನ ಜತೆ ದೂಳು ಬಿರುಗಾಳಿಯೆದ್ದಿದೆ. ಇದರ ಬೆನ್ನಲ್ಲೇ ಭಾರೀ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry