ಭಾರತದ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಇರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋಟೊಗಳನ್ನು ದುಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆಯಲಾಗಿದೆ ಎಂದೂ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದ ನಂತರ ಹಾರ್ದಿಕ್ ಮತ್ತು ಅನನ್ಯಾ ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು ಎಂದೂ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಚಿತ್ರಗಳನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಇದೇ ಚಿತ್ರಗಳನ್ನು ಇಂಥದ್ದೇ ಪ್ರತಿಪಾದನೆಯೊಂದಿಗೆ ಹಲವರು ಹಂಚಿಕೊಂಡಿರುವುದು ಕಂಡುಬಂತು. ಚಿತ್ರಗಳನ್ನು ಮತ್ತಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿತ್ರಗಳ ನಡುವೆ ಮತ್ತು ಚಿತ್ರಗಳಲ್ಲಿರುವ ಇಬ್ಬರ ಮುಖಚಹರೆಗಳಲ್ಲಿ ವ್ಯತ್ಯಾಸಗಳಿದ್ದು, ಇದು ಕೃತಕ ಬುದ್ಧಿಮತ್ತೆಯ (ಎಐ) ಚಿತ್ರ ಇರಬಹುದು ಎನ್ನುವ ಅನುಮಾನ ಮೂಡಿಸಿತು. ಚಿತ್ರಗಳನ್ನು ಹೈವ್ ಮಾಡರೇಷನ್ ಎನ್ನುವ ಎಐ ಪತ್ತೆ ಸಾಧನದ ಮೂಲಕ ಪರಿಶೀಲಿಸಿದಾಗ, ಇವು ಎಐ ಚಿತ್ರಗಳೇ ಎಂಬುದು ಖಚಿತವಾಯಿತು. ಎಐ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.