ಬೆಂಗಳೂರು: ದೇಶವ್ಯಾಪಿ ಲಾಕ್‍ಡೌನ್ ಜೂನ್ ತಿಂಗಳ ಕೊನೆಯವರೆಗೆ ವಿಸ್ತರಣೆಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಷ್ಟಾಚಾರ ಮತ್ತು ಪ್ರಕ್ರಿಯೆಯ ಅನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಸಂದೇಶವೊಂದು ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶ ಹೀಗಿದೆ:

ಮಾರಕ ವೈರಸ್‌ನ್ನು ನಿಯಂತ್ರಿಸಲು ಲಾಕ್‍ಡೌನ್‍ಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಶಿಷ್ಟಾಚಾರ ಮತ್ತು ಪ್ರಕ್ರಿಯೆ ಹೀಗಿದೆ.
ಮೊದಲ ಕ್ರಮ - 1 ದಿನ
ಎರಡನೇ ಕ್ರಮ - 21 ದಿನಗಳು
ಐದು ದಿನಗಳ ನಂತರ
ಮೂರನೇ ಕ್ರಮ - 28 ದಿನಗಳು
ಐದು ದಿನಗಳ ನಂತರ
ನಾಲ್ಕನೇ ಕ್ರಮ- 15 ದಿನಗಳು
ನಮ್ಮ ಭಾರತ ಸರ್ಕಾರ ಅದನ್ನೇ ಪಾಲಿಸುತ್ತಿದೆ
ಮಾರ್ಚ್ 22- 1 ದಿನ ( ಲಾಕ್‍ಡೌನ್ ಟ್ರಯಲ್)
ಮಾರ್ಚ್ 24- ಏಪ್ರಿಲ್ 14 - 21 ದಿನಗದಳು (ಮೊದಲ ಲಾಕ್‍ಡೌನ್)
ಏಪ್ರಿಲ್ 15- ಏಪ್ರಿಲ್ 19- ಲಾಕ್‍ಡೌನ್‌ಗೆ ವಿರಾಮ
ಏಪ್ರಿಲ್ 20 -ಮೇ 18 - 28 ದಿನಗಳು (ಎರಡನೇ ಲಾಕ್‍ಡೌನ್)
ಕೋವಿಡ್ ರೋಗಿಗಳ ಸಂಖ್ಯೆ ಸೊನ್ನೆ ಆದರೆ
ಲಾಕ್‍ಡೌನ್ ಹಿಂಪಡೆಯಲಾಗುವುದು
ಇಲ್ಲವಾದರೆ
ಮೇ 19- ಮೇ 24- ಲಾಕ್‌ಡೌನ್‌ನಿಂದ ವಿರಾಮ
ಮೇ 25- ಜೂನ್ 10 - 15 ದಿನಗಳು (ಕೊನೆ ಹಂತದ ಲಾಕ್‌ಡೌನ್ )

ಇದೇ ಸಂದೇಶ ವಿಶ್ವ ಆರೋಗ್ಯ ಸಂಸ್ಥೆಯ ಲೋಗೊದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಫ್ಯಾಕ್ಟ್‌ಚೆಕ್
ವೈರಲ್ ಸಂದೇಶ ಫೇಕ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. ಡಬ್ಲ್ಯುಎಚ್‍ಒ ಸೌತ್ ಈಸ್ಟ್ ಏಷ್ಯಾ ಟ್ವಿಟರ್ ಹ್ಯಾಂಡಲ್ ಈ ವಿಷಯವನ್ನು ಟ್ವೀಟಿಸಿದ್ದು ಲಾಕ್‍ಡೌನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಶಿಷ್ಟಾಚಾರ ಎಂದು ಹೇಳುವ ಸಂದೇಶ ಸತ್ಯಕ್ಕೆ ದೂರವಾದುದು ಮತ್ತು ನಕಲಿ. ಲಾಕ್‍ಡೌನ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ಯಾವುದೇ ಶಿಷ್ಟಾಚಾರ ಇಲ್ಲ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.