ಎರಡು ಮೋಟರ್ ಬೈಕ್ಗಳ ನಡುವೆ ಅಪಘಾತ ಸಂಭವಿಸಿ, ಕೆಳಕ್ಕೆ ಬಿದ್ದು ಒಂದಕ್ಕೊಂದು ಬೆಸೆದುಕೊಂಡ ಅವು ರಸ್ತೆ ಮೇಲೆ ಗರಗರನೆ ತಿರುಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬೈಕ್ಗಳು ತಿರುಗುವುದನ್ನು ಅನೇಕರು ಸುತ್ತುವರಿದು ನೋಡುವುದು, ಕೆಲವರು ಬೈಕ್ಗಳನ್ನು ಪ್ರತ್ಯೇಕಿಸಲು ಕೋಲು ಹಿಡಿದು ಬರುವುದು ವಿಡಿಯೊದಲ್ಲಿದೆ. ‘ಇದು ಜೈಪುರದಲ್ಲಿ ನಡೆದ ವಿಚಿತ್ರ ಅಪಘಾತವಾಗಿದೆ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಇನ್ವಿಡ್ ಟೂಲ್ ಮೂಲಕ ವಿಡಿಯೊದ ಕೀಫ್ರೇಮ್ ಅನ್ನು ಪ್ರತ್ಯೇಕಿಸಿ, ಅದನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಇದೇ ವಿಡಿಯೊ ಅನ್ನು ಇಂತಹದ್ದೇ ಪ್ರತಿಪಾದನೆಯೊಂದಿಗೆ ಹಲವರು ಹಂಚಿಕೊಂಡಿರುವುದು ಕಂಡುಬಂತು. ಗೂಗಲ್ ಲೆನ್ಸ್ ಸರ್ಚ್ ಮೂಲಕ ಇಂಡೊನೇಷ್ಯಾದ ವೆಬ್ಪೋರ್ಟಲ್ನಲ್ಲಿ 2025ರ ಆ.18ರಂದು ಈ ವಿಡಿಯೊ ಅಪ್ಲೋಡ್ ಆಗಿರುವುದು ಕಂಡಿತು. ಇಂಡೊನೇಷ್ಯಾದಲ್ಲಿ ನಡೆದ ಅಪಘಾತ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಬೈಕ್ನ ನಂಬರ್ ಪ್ಲೇಟ್ನಲ್ಲಿ ‘ಬಿಎಂ 3675 ಎಫ್ಸಿ’ ಎಂದಿದೆ. ಭಾರತದಲ್ಲಿ ಈ ಸರಣಿಯ ನಂಬರ್ಗಳು ಯಾವ ರಾಜ್ಯದಲ್ಲೂ ಇಲ್ಲ. ಮತ್ತಷ್ಟು ಹುಡುಕಾಟ ನಡೆಸಿದಾಗ, ಇದು ಇಂಡೊನೋಷ್ಯಾಕ್ಕೆ ಸೇರಿರುವುದು ಖಚಿತವಾಯಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.