ಶ್ರೀನಗರ:ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಬುಧವಾರ ಉಗ್ರರು ದಾಳಿ ನಡೆಸಿದ್ದು ಇದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ನ 5 ಯೋಧರು ಹುತಾತ್ಮರಾಗಿದ್ದಾರೆ.
#WATCH Jammu & Kashmir: Gunshots heard at the site of Anantnag terrorist attack in which 3 CRPF personnel have lost their lives & 2 have been injured, SHO Anantnag also critically injured. 1 terrorist has been neutralized in the operation. (Visuals deferred by unspecified time) pic.twitter.com/Uspen8iC4p
Anantnag (J&K) terrorist attack: Two CRPF personnel have lost their lives, 3 CRPF personnel injured, SHO Anantnag also critically injured. One terrorist neutralized. pic.twitter.com/gO37tjnDNf
ಅನಂತ್ನಾಗ್ನ ಕೆಪಿ ರಸ್ತೆಯಲ್ಲಿ ಸಿಆರ್ಪಿಎಫ್ ಯೋಧರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಉಗ್ರರುಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 5 ಯೋಧರು ಹುತಾತ್ಮರಾಗಿದ್ದಾರೆ.
ಇಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.
ದಾಳಿಯಲ್ಲಿ ಓರ್ವ ಉಗ್ರ ಮತ್ತು ಅನಾಮಿಕ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾರೆ.ಅನಂತ್ನಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಫೀಸರ್ ಅರ್ಷದ್ ಅಹಮದ್ ಅವರಿಗೆ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕರೆದೊಯ್ಯಲಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.