ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

Last Updated 26 ಫೆಬ್ರುವರಿ 2021, 4:26 IST
ಅಕ್ಷರ ಗಾತ್ರ

ಬೆಂಗಳೂರು: ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ, ಭಾರತದ ವಾಯುಪಡೆ ನಡೆಸಿದ ಬಾಲಾಕೋಟ್‌ ವೈಮಾನಿಕ ದಾಳಿ ನಡೆದು ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಭಾರತೀಯ ಸಶಸ್ತ್ರ ಪಡೆಗಳನ್ನು ಕೊಂಡಾಡಿದ್ದಾರೆ.

'ಬಾಲಾಕೋಟ್ ವೈಮಾನಿಕದಾಳಿಗೆ ಎರಡು ವರ್ಷ ತುಂಬಿದ ಈ ದಿನದಂದು, ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ನಾನು ನಮನ ಸಲ್ಲಿಸುತ್ತೇನೆ. ಬಾಲಾಕೋಟ್ ದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧದ ಭಾರತದ ಬಲವಾದ ಇಚ್ಚಾಶಕ್ತಿಯನ್ನು ತೋರಿಸುತ್ತದೆ. ಭಾರತವನ್ನು ಸುರಕ್ಷಿತವಾಗಿರಿಸಿರುವ ಸಶಸ್ತ್ರಪಡೆಗಳ ಬಗ್ಗೆ ಹಮ್ಮೆಯಾಗುತ್ತದೆ,' ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

'2019ರ ಈ ದಿನ, ಭಾರತೀಯ ವಾಯುಪಡೆಯು ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆ ನೀಡುವ ಮೂಲಕ, ಭಯೋತ್ಪಾದನೆ ವಿರುದ್ಧದ ಭಾರತದ ಹೊಸ ನೀತಿಗಳನ್ನು ಸ್ಪಷ್ಟಪಡಿಸಿತು,' ಎಂದು ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

2019ರ ಫೆ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿರುವ ಉಗ್ರರ ಅಡಗುದಾಣಗಳ ಕುರಿತು ಆ ದೇಶಕ್ಕೆ ದಾಖಲೆಗಳನ್ನು ನೀಡಿತ್ತು. ಅದರ ಪ್ರಕಾರ ಬಾಲಾಕೋಟ್‌ನಲ್ಲಿ 600 ಉಗ್ರರು ತಂಗಬಹುದಾದ ಆರು ಎಕರೆ ವಿಸ್ತೀರ್ಣದ ಉಗ್ರ ತರಬೇತಿ ಕೇಂದ್ರವಿರುವುದಾಗಿ ತಿಳಿಸಿತ್ತು. ಇದೇ ಜಾಗದ ಮೇಲೆ ಭಾರತೀಯ ವಾಯುಪಡೆ ಫೆ.26ರಂದು ವೈಮಾನಿಕ ದಾಳಿ ನಡೆಸಿತ್ತು. ‘ದಾಳಿಯಿಂದ ಉಗ್ರರ ನೆಲೆಗೆ ಭಾರಿ ಹಾನಿಯಾಗಿದೆ. 350ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ಇವುಗಳನ್ನೂಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT