ನವದೆಹಲಿ: 2024ರ ಅವಧಿಯಲ್ಲಿ ಭಾರತೀಯ ನಾಗರಿಕ ವಿಮಾನಯಾನ ವಲಯಕ್ಕೆ 1,019 ಹುಸಿ ಬಾಂಬ್ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬಂದಿವೆ. ಹಿಂದಿನ 6 ವರ್ಷಗಳಿಗೆ ಹೋಲಿಸಿದರೆ ಇದು 300 ಪಟ್ಟು ಅಧಿಕವಾಗಿದೆ ಎಂದು ಅಧಿಕೃತ ವರದಿಯು ತಿಳಿಸಿದೆ.

2018ರಿಂದ 2023ರವರೆಗೆ 330 ಬೆದರಿಕೆ ಸಂದೇಶಗಳು ಬಂದಿದ್ದವು. 2024ರ ಒಂದು ವರ್ಷದ ಅವಧಿಯಲ್ಲಿಯೇ ಈ ಸಂಖ್ಯೆ 1,019ರಷ್ಟಾಗಿದೆ. ಇವುಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು, 687 ಬೆದರಿಕೆ ಸಂದೇಶಗಳು ಬಂದಿವೆ. ಒಟ್ಟು 600ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಈ ಬೆದರಿಕೆಗಳು ಬಂದಿವೆ.

ಒಟ್ಟು ಬೆದರಿಕೆಗಳಲ್ಲಿ ಶೇ60ರಷ್ಟು ಸಂದೇಶಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಳುಹಿಸಲಾಗಿದೆ. ಉಳಿದವನ್ನು ಇ–ಮೇಲ್, ಪೋನ್ ಕರೆ ಹಾಗೂ ಇತರ ಮಾದ್ಯಮಗಳ ಮೂಲಕ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.