ದೇಶದ ವಿವಿಧ ಪ್ರಾದೇಶಿಕ ಪಕ್ಷಗಳು 2023–24ನೇ ಸಾಲಿನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಆದಾಯ, ವೆಚ್ಚಗಳ ಮಾಹಿತಿಯನ್ನು ಸಂಗ್ರಹಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳೇ ಅಧಿಕ ಆದಾಯ ಬರುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಬಿಆರ್ಎಸ್ ಪಕ್ಷವೇ ಅಧಿಕ ಆದಾಯ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಟಿಎಂಸಿ ಇದೆ

60: ದೇಶದಲ್ಲಿರುವ ಒಟ್ಟು ಪ್ರಾದೇಶಿಕ ಪಕ್ಷಗಳು

40 : ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ ಪ್ರಾದೇಶಿಕ ಪಕ್ಷಗಳು

₹2,532.09 ಕೋಟಿ: 40 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಮೊತ್ತ

ಟಿಡಿಪಿ ಆದಾಯ ಭಾರಿ ಏರಿಕೆ

ಎಲ್ಲ 40 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದಲ್ಲಿ ಮೊದಲ 5 ಪಕ್ಷಗಳ ಆದಾಯದ ಒಟ್ಟು ಮೊತ್ತವೇ ₹2,105.82 ಕೋಟಿ (ಶೇ 83.17ರಷ್ಟಿದೆ) ಇದೆ

ಬಾಂಡ್ ಮೂಲಕವೇ ಆದಾಯ

ಹೆಚ್ಚಿನ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ಒಟ್ಟು ಆದಾಯದಲ್ಲಿ ಶೇ 50ಕ್ಕಿಂತ ಹೆಚ್ಚು ಚುನಾವಣಾ ಬಾಂಡ್ ಮೂಲಕವೇ ಬಂದಿದೆ. ಟಿಎಂಸಿ ಪಕ್ಷಕ್ಕೆ ಬಂದ ಒಟ್ಟು ಆದಾಯದಲ್ಲಿ ಶೇ 94.74ರಷ್ಟು ಆದಾಯವು ಚುನಾವಣಾ ಬಾಂಡ್ ಮೂಲಕವೇ ಬಂದಿದೆ. ನಂತರದ ಸ್ಥಾನದಲ್ಲಿ ಬಿಆರ್ಎಸ್ ಇದೆ. ಡಿಎಂಕೆ, ಸಮಾಜವಾದಿ ಪಕ್ಷ ಸೇರಿ ಕೆಲವು ಪಕ್ಷಗಳು ಇದಕ್ಕೆ ಹೊರತಾಗಿವೆ. ಸಮಾಜವಾದಿ ಪಕ್ಷಕ್ಕೆ ಬಾಂಡ್ ಮೂಲಕ ಆದಾಯವೇ ಬಂದಿಲ್ಲ

ಜೆಡಿಎಸ್ ಆದಾಯ: ಸುಮಾರು 40 ಪಟ್ಟು ಹೆಚ್ಚಳ

2022–23 ಮತ್ತು 2023–24ನೇ ಆರ್ಥಿಕ ವರ್ಷದ ಹೋಲಿಕೆಯಲ್ಲಿ ಜೆಡಿಎಸ್ ಪಕ್ಷದ ಆದಾಯವು ಸುಮಾರು 40 ಪಟ್ಟು ಏರಿಕೆಯಾಗಿದೆ. ಇದರಲ್ಲಿ ಸುಮಾರು ಶೇ 99ರಷ್ಟು ಆದಾಯವು ಚುನಾವಣಾ ಬಾಂಡ್ ಮೂಲಕವೇ ಬಂದಿದೆ

ಆರ್ಥಿಕ ವರ್ಷ: ಆದಾಯ

2022–23: ₹1.47 ಕೋಟಿ

2023–24: ₹44.18 ಕೋಟಿ

* ₹44.18 ಕೋಟಿ ಆದಾಯದಲ್ಲಿ ₹41 ಕೋಟಿಯಷ್ಟು ಆದಾಯವು ಚುನಾವಣಾ ಬಾಂಡ್ ಮೂಲಕ ಬಂದಿದೆ

ಆಧಾರ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.