ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಇ.ಡಿ ವಿಚಾರಣೆಗೆ ಹಾಜರಾದ ಜಿಲ್ಲಾಧಿಕಾರಿಗಳು

Published 25 ಏಪ್ರಿಲ್ 2024, 15:13 IST
Last Updated 25 ಏಪ್ರಿಲ್ 2024, 15:13 IST
ಅಕ್ಷರ ಗಾತ್ರ

ಚೆನ್ನೈ: ಅಕ್ರಮ ಮರಳುಗಾರಿಕೆ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳು ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು. ಸುಪ್ರಿಂ ಕೋರ್ಟ್ ಈ ಕುರಿತು ಏ. 2ರಂದು ನಿರ್ದೇಶನ ನೀಡಿತ್ತು.

ಜಿಲ್ಲಾಧಿಕಾರಿಗಳಾದ ವಿ.ಆರ್‌.ಸುಬ್ಬುಲಕ್ಷ್ಮಿ (ವೆಲ್ಲೂರು), ಎಂ.ತಂಗವೇಲ್ (ಕರೂರ್), ಆ್ಯನೆ ಮೇರಿ ಸ್ವರ್ಣಾ (ಅರಿಯಲೂರು), ಎಂ.ಪ್ರದೀಪ್‌ ಕುಮಾರ್ (ತಿರುಚಿನಾಪಳ್ಳಿ) ಮತ್ತು ದೀಪಕ್‌ ಜೇಕಬ್‌ (ತಂಜಾವುರು) ಅವರು ಇ.ಡಿ ಎದುರು ಹಾಜರಾದವರು.

ವಿಚಾರಣೆಗೆ ಹಾಜರಾಗದ ಅಧಿಕಾರಿಗಳ ಧೋರಣೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಏ. 25ರೊಳಗೆ ಹಾಜರಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT