ಬೆಂಗಳೂರು: ಕಣ್ಣೋಟದಿಂದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ 'ಒರು ಅಡಾರ್ ಲವ್’ ಚಿತ್ರದ ಗೀತೆಯೊಂದರ ಸಂಬಂಧ ದಾಖಲಾಗಿರುವ ಎಫ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ' ಗೀತೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಕೆಲ ಮುಸ್ಲಿಂ ಯುವಕರ ಗುಂಪು ಹೈದರಾಬಾದ್‌ನ ಫಲಕ್ನುಮಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ‘ಮಾಣಿಕ್ಯ ಮಲರಾಯ..’ ಗೀತೆ ವಿರುದ್ಧ ಮಾತ್ರ ಆಕ್ಷೇಪಣೆ ಇದೆ. ಪ್ರಿಯಾ ಹಾಗೂ ಚಿತ್ರದ ನಿರ್ದೇಶಕರ ವಿರುದ್ಧ ಅಲ್ಲ ಎನ್ನಲಾಗಿದೆ.

ಪ್ರಿಯಾ ಪ್ರಕಾಶ್ ಈ ದೂರಿನ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.