ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ತಾಜ್ ಮಹಲ್ ಭೇಟಿ ಇಂದು (ಭಾನುವಾರ) ದಿಢೀರ್ ಆಗಿ ರದ್ದಾಗಿದೆ.

ಅಫ್ಗಾನಿಸ್ತಾನ ವಿದೇಶಾಂಗ ಸಚಿವರ ಆಗ್ರಾ ಭೇಟಿ ರದ್ದಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಆಗ್ರಾದ ಐತಿಹಾಸಿಕ ತಾಜ್ ಮಹಲ್ಗೆ ಅಮೀರ್ ಖಾನ್ ಮುತ್ತಾಕಿ ಅವರ ಭೇಟಿ ಇಂದು (ಅ.12) ನಿಗದಿಯಾಗಿತ್ತು.

ಮುತ್ತಾಕಿ ಅವರು ಶನಿವಾರದಂದು ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್ನಲ್ಲಿರುವ ಇಸ್ಲಾಂ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆ ದಾರುಲ್ ಉಲೂಮ್ಗೆ ಭೇಟಿ ನೀಡಿದ್ದರು.

ಆದರೆ ಮುತ್ತಾಕಿ ಅವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ಅವಕಾಶ ನೀಡದಿರುವ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು.

ಆರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮುತ್ತಾಕಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕಾಬೂಲ್ನಲ್ಲಿ ರಾಯಭಾರಿ ಕಚೇರಿ ಪುನರಾರಂಭ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದಾಗಿ ಜೈಶಂಕರ್ ಭರವಸೆ ನೀಡಿದ್ದರು.

ಅಫ್ಗಾನಿಸ್ತಾನದಲ್ಲಿ ನಾಲ್ಕು ವರ್ಷದ ಹಿಂದೆ ಅಧಿಕಾರ ಪಡೆದ ಬಳಿಕ ತಾಲಿಬಾನ್ನ ಉನ್ನತ ನಾಯಕರೊಬ್ಬರು ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.
.ದೇವಬಂದ್: ಪತ್ರಕರ್ತೆಯರಿಗೆ ದಾರುಲ್ ಉಲೂಮ್ನಲ್ಲೂ ಮತ್ತೆ ಪ್ರವೇಶ ನಿರಾಕರಣೆ?.ಅಫ್ಗನ್ ಸಚಿವರ ಸುದ್ದಿಗೋಷ್ಠಿ | ಪತ್ರಕರ್ತೆಯರಿಗೆ ನಿರ್ಬಂಧ: ವಿಪಕ್ಷಗಳ ವಾಗ್ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.