ನವದೆಹಲಿ: ‘ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನ ಪತನಗೊಳ್ಳಲು ಪೈಲಟ್ ಕಾರಣರಲ್ಲ. ಯಾರೂ ಅವರನ್ನು ದೂಷಿಸಿಲ್ಲ. ಪ್ರಾಥಮಿಕ ವರದಿಯಲ್ಲೂ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಇದೊಂದು ದುರ್ಘಟನೆ. ನೀವು ಮಾನಸಿಕವಾಗಿ ಕುಗ್ಗಬೇಡಿ, ಅನಗತ್ಯವಾಗಿ ಹೊರೆ ಹೊತ್ತುಕೊಳ್ಳಬೇಡಿ.’

ಅಹಮದಾಬಾದ್ನಲ್ಲಿ ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾ.ಸುಮಿತ್ ಸಭರ್ವಾಲ್ ಅವರ 91 ವರ್ಷದ ತಂದೆಗೆ, ಸುಪ್ರೀಂ ಕೋರ್ಟ್ನ ಪೀಠ ಶುಕ್ರವಾರ ವಿಚಾರಣೆ ವೇಳೆ ಹೇಳಿದ ಭರವಸೆಯ ನುಡಿಗಳಿವು.

‘ವಿಮಾನ ದುರಂತಕ್ಕೆ ಪೈಲಟ್ ಕಾರಣ ಎಂದು ಕೆಲವರು ದೂರುತ್ತಿದ್ದಾರೆ. ‘ವಾಲ್ಸ್ಟ್ರೀಟ್ ಜರ್ನಲ್’ನಲ್ಲೂ ಈ ಬಗ್ಗೆ ಲೇಖನ ಪ್ರಕಟಗೊಂಡಿದೆ. ಇಂತಹ ಆರೋಪಗಳಿಂದ ಮನಸ್ಸಿಗೆ ನೋವಾಗುತ್ತಿದೆ’ ಎಂದು ಸಮಿತ್ ಅವರ ತಂದೆ ಪುಷ್ಕರಾಜ್ ಸಭರ್ವಾಲ್ ದೂರಿದ್ದರು. ಭಾರತೀಯ ಪೈಲಟ್ಗಳ ಒಕ್ಕೂಟವೂ ಅವರ ಬೆಂಬಲಕ್ಕೆ ನಿಂತು, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಪುಷ್ಕರಾಜ್ ಪರವಾಗಿ ವಕೀಲ ಗೋಪಾಲ್ ಶಂಕರನಾರಾಯಣನ್ ಕೋರ್ಟ್ಗೆ ಹಾಜರಾಗಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರ ಪೀಠವು ಪುಷ್ಕರಾಜ್ ಅವರಿಗೆ, ‘ನೀವು ದುಃಖಿಸಬೇಡಿ’ ಎಂದು ಹೇಳಿದ್ದಲ್ಲದೆ, ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಈ ಬಗ್ಗೆ ನೋಟಿಸ್ ಜಾರಿಗೊಳಿಸಿತು.

‘ವಾಲ್ಸ್ಟ್ರೀಟ್ ಜರ್ನಲ್’ನಲ್ಲಿ ಭಾರತವನ್ನು ದೂಷಿಸಲು ಈ ಕೀಳು ಅಭಿರುಚಿಯ ವರದಿ ಪ್ರಕಟಿಸಲಾಗಿದೆ. ವಿಮಾನ ಅಪಘಾತ ತನಿಖಾ ಮಂಡಳಿಯು (ಎಎಐಬಿ) ಜುಲೈ 12ರಂದು ವರದಿ ಪ್ರಕಟಿಸಿದೆ. ಈ ವರದಿಯನ್ನು ಕೋರ್ಟ್ ಗಮನಿಸಿದೆ. ಇದರಲ್ಲಿ ಎಲ್ಲೂ ಪೈಲಟ್ ಮೇಲೆ ಆರೋಪ ಹೊರಿಸಿಲ್ಲ. ಅವರನ್ನು ದೂಷಿಸಿಲ್ಲ’ ಎಂದು ನ್ಯಾಯಪೀಠ ಹೇಳಿತು.

ಈ ಪ್ರಕರಣವೂ ಸೇರಿ ವಿಮಾನ ದುರಂತಕ್ಕೆ ಸಂಬಂಧಿಸಿದ ಇನ್ನಿತರ ಪ್ರಕರಣಗಳ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.

ಜೂನ್ 12ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಪೈಲಟ್ ಸೇರಿ ಒಟ್ಟು 260 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.