ನವದೆಹಲಿ: ವಿಮಾನವು ಪತನಗೊಳ್ಳುವ ಮುನ್ನ, ಮೂರು ತುರ್ತು ಸಂದರ್ಭಗಳಲ್ಲಿ ಮಾತ್ರ ತೆರೆದುಕೊಳ್ಳುವ ವಿಮಾನದ ರ್ಯಾಮ್ ಏರ್ ಟರ್ಬೈನ್ (ಆರ್ಎಟಿ) ಸಾಧನವು ಸಕ್ರಿಯವಾಗಿತ್ತು ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.

ಜೂನ್ 12ರಂದು ವಿಮಾನ ಪತನಕ್ಕೂ ಕೆಲವೇ ಕ್ಷಣ ಮುನ್ನ ಚಿತ್ರೀಕರಿಸಲಾದ ವಿಡಿಯೊದಲ್ಲಿ ವಿಮಾನದ ರ್ಯಾಮ್ ಏರ್ ಟರ್ಬೈನ್ ಸಾಧನವು ತೆರೆದುಕೊಂಡಿರುವುದು ಕಾಣುತ್ತದೆ. ಸಾಮಾನ್ಯವಾಗಿ ವಿಮಾನದ ಎರಡೂ ಎಂಜಿನ್ಗಳು ವಿಫಲವಾದಾಗ ಅಥವಾ ಎಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವ್ಯವಸ್ಥೆ ವಿಫಲವಾದಾಗ ಮಾತ್ರ ಈ ಸಾಧನ ಸ್ವಯಂಚಾಲಿತವಾಗಿ ಸಕ್ರಿಯವಾಗುತ್ತದೆ. ಆರ್ಎಟಿ ಸಾಧನವು ಸಕ್ರಿಯಗೊಳ್ಳುವಾಗ ಕೇಳುವ ಶಬ್ದವೂ ಸಹ ವಿಡಿಯೊದಲ್ಲಿ ದಾಖಲಾಗಿದೆ. ಹೀಗಾಗಿ ವಿಮಾನ ಪತನಕ್ಕೆ ವಿಮಾನದ ಎರಡೂ ಎಂಜಿನ್ಗಳು ವಿಫಲವಾಗಿರುವುದು ಅಥವಾ ಅದರ ಎಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವ್ಯವಸ್ಥೆಯ ವೈಫಲ್ಯವೇ ಕಾರಣವಿರಬಹುದು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.