ಫರೀದಾಬಾದ್:  ಅಲ್ ಫಲಾಹ್ ವಿಶ್ವವಿದ್ಯಾಲಯದ ‘ವೈಟ್ಕಾಲರ್‘ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರ ಪೊಲೀಸ್ ವಿಶೇಷ ತನಿಖಾ ತಂಡವು ಶನಿವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ.

ಶ್ರೀನಗರದ ಬಟಮಾಲೂ ನಿವಾಸಿ ತುಫೈಲ್ ನಿಯಾಜ್ ಭಟ್ ಬಂಧಿತ ಆರೋಪಿ. ತುಫೈಲ್ ನಿಯಾಜ್ ಭಟ್ ಸೇರಿದಂತೆ ಇದುವರೆಗ ಒಟ್ಟು ಏಳು ‘ವೈಟ್ಕಾಲರ್‘ ಉಗ್ರರನ್ನು ಬಂಧಿಸಿದಂತಾಗಿದೆ.

ರಾಷ್ಟ್ರೀಯ ತನಿಖಾ ತಂಡವು ನ.20ರಂದು ಅಲ್–ಫಲಾಹ್ ವಿವಿಯ ಮುವರು ವೈದ್ಯರು ಮತ್ತು ಒಬ್ಬ ಉಪನ್ಯಾಸಕನನ್ನು ವಶಕ್ಕೆ ಪಡೆದಿತ್ತು. ಇದಕ್ಕೂ ಮುನ್ನ ವಿವಿಯ ಉಪನ್ಯಾಸಕ ಮುಝಮ್ಮಿಲ್ ಗನೈ ಆದಿಲ್ ರ್ಯಾಥರ್ ಶಾಹೀನಾ ಸಾಯೀದ್ ಮೌಲ್ವಿ ಇಫ್ರಾನ್ ಅಹಮದ್ ವಾಗೆ ಅವರನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಶುಕ್ರವಾರ ಕ್ಯಾಬ್ ಚಾಲಕನನ್ನು ಮತ್ತೆ ಬಂಧಿಸಿರುವ ಎನ್ಐಎ ವಿಚಾರಣೆಗೆ ಒಳಪಡಿಸಿದೆ.

ಈತನ ಮನೆಯಿಂದ ಗ್ರೈಂಡರ್ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಝಮ್ಮಿಲ್ ಗನೈ ಈ ಕ್ಯಾಬ್ ಚಾಲಕನ ಮೂಲಕ ಅಲ್–ಫಲಾಹ್ ವಿವಿಯ ಕೆಲವು ವಿದ್ಯಾರ್ಥಿಗಳಿಗೆ ಸಿಮ್ಕಾರ್ಡ್ ಪೂರೈಸಿದ್ದ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.