ನವದೆಹಲಿ: ಪಹಲ್ಗಾಮ್ನಲ್ಲಿ ಅಮಾಯಕ 26 ಪ್ರವಾಸಿಗರನ್ನು ನಿರ್ದಯವಾಗಿ ಕೊಂದ ಲಷ್ಕರ್–ಇ–ತಯಬಾ (ಎಲ್ಇಟಿ) ಸಂಘಟನೆಯ ಮೂವರು ‘ಎ’ ವರ್ಗೀಕೃತ ಉಗ್ರರನ್ನು ‘ಆಪರೇಷನ್ ಮಹಾದೇವ’ದ ಮೂಲಕ ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಗಳವಾರ ಘೋಷಿಸಿದರು.

‘ಆಪರೇಷನ್ ಸಿಂಧೂರ’ ಕುರಿತ ವಿಶೇಷ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಅವರು, ‘ಹತರಾದ ಉಗ್ರರನ್ನು ಸುಲೇಮಾನ್ ಅಲಿಯಾಸ್ ಫೈಜಲ್, ಅಫ್ಗಾನಿ ಮತ್ತು ಜಿಬ್ರಾನ್ ಎಂದು ಗುರುತಿಸಲಾಗಿದೆ. ಶ್ರೀನಗರ ಬಳಿ ಸೇನಾ ಸಿಆರ್ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಪಹಲ್ಗಾಮ್ ಹತ್ಯಾಕಾಂಡಕ್ಕೆ ಬಳಸಲಾಗಿದ್ದ ಎಂ–9 ಮತ್ತು ಎರಡು ಎಕೆ-47 ರೈಫಲ್ಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಇಬ್ಬರು ಉಗ್ರರು ಬಳಿಯಿದ್ದ ಪಾಕಿಸ್ತಾನದ ಮತದಾರರ ಗುರುತಿನ ಚೀಟಿ ಮತ್ತು ಪಾಕಿಸ್ತಾನದಲ್ಲಿಯೇ ತಯಾರಿಸಿದ ಚಾಕೊಲೇಟ್ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಶಾ ಬಹಿರಂಗಪಡಿಸಿದರು. ಪಹಲ್ಗಾಮ್ ದಾಳಿಯ ನಂತರ ರಾಷ್ಟ್ರೀಯ ತನಿಖಾ ದಳವು 1055 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ ಎಂದು ಅವರು ಹೇಳಿದರು.

ಸುಲೇಮಾನ್ ಎಲ್ಇಟಿಯ ಕಮಾಂಡರ್ ಆಗಿದ್ದರೆ, ಅಫ್ಘಾನ್ ಮತ್ತು ಜಿಬ್ರಾನ್ ‘ಎ’ ವರ್ಗೀಕೃತ ಉಗ್ರರು ಎಂದು ಶಾ ಹೇಳಿದರು. ‘ಬೈಸರನ್ ಕಣಿವೆಯಲ್ಲಿ ನಮ್ಮ ನಾಗರಿಕರನ್ನು ಕೊಂದ ಈ ಮೂವರು ಉಗ್ರರನ್ನು ನಿರ್ನಾಮ ಮಾಡಲಾಗಿದೆ’ ಎಂದು ಅವರು ಹೇಳಿದರು. ಈ ವೇಳೆ, ಬಿಜೆಪಿ ಸಂಸದರು 'ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿದರು.

‘ಪಹಲ್ಗಾಮ್ ದಾಳಿಯೊಂದಿಗೆ ಈ ಉಗ್ರರು ಸಂಬಂಧ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅವರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ಜನರನ್ನು ಮೊದಲೇ ಬಂಧಿಸಲಾಗಿತ್ತು. ಶ್ರೀನಗರಕ್ಕೆ ಶವಗಳನ್ನು ತಂದ ನಂತರ ಅವರಿಗೆ ಆಶ್ರಯ ನೀಡಿದವರಿಗೆ ತೋರಿಸಲಾಯಿತು. ಈ ಮೂವರು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಕುರಿತು ಅವರು ಮಾಹಿತಿ ನೀಡಿದರು’ ಎಂದರು.

ಹೆಚ್ಚಿನ ದೃಢೀಕರಣಕ್ಕಾಗಿ ವಿಶೇಷ ವಿಮಾನದಲ್ಲಿ ಎಂ–9 ಹಾಗೂ ಎಕೆ–47 ರೈಫಲ್ಗಳನ್ನು ಚಂಡೀಗಢದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷೆ ನಡೆಸಲಾಯಿತು. ಉಗ್ರರ ದಾಳಿಯ ಕಾರ್ಟ್ರಿಜ್ಗಳ ಎಫ್ಎಸ್ಎಲ್ ತಾಂತ್ರಿಕ ವಿವರದೊಡನೆ ಉಗ್ರರ ರೈಫಲ್ಗಳ ತಾಂತ್ರಿಕ ವಿವರ ತುಲನೆ ಮಾಡಲಾಯಿತು. ದಾಳಿ ನಡೆಸಿದವರು ಈ ಉಗ್ರರೇ ಎನ್ನುವುದು ಖಚಿತವಾಯಿತು. ನನ್ನ ಬಳಿ ಬ್ಯಾಲಿಸ್ಟಿಕ್ ವರದಿ ಇದೆ. ಇದನ್ನು ಆರು ಬ್ಯಾಲಿಸ್ಟಿಕ್ ತಜ್ಞರು ದೃಢಪಡಿಸಿದ್ದಾರೆ. ಬೆಳಿಗ್ಗೆ 4.46ಕ್ಕೆ ವಿಡಿಯೊ ಕರೆ ಮಾಡಿದ ಅವರು, ಇವು ಪಹಲ್ಗಾಮ್ ದಾಳಿಯಲ್ಲಿ ಬಳಸಲಾದ ಗುಂಡುಗಳು ಎಂಬುದನ್ನು ಖಚಿತಪಡಿಸಿದರು’ ಎಂದು ಶಾ ಹೇಳಿದರು.

ಪ್ರವಾಸಿಗರ ಹತ್ಯೆಯಾದ ದಿನವೇ ‘ಆಪರೇಷನ್ ಮಹಾದೇವ’ ಕಾರ್ಯಾಚರಣೆ ಆರಂಭವಾಯಿತು. ಉಗ್ರರು ಪಾಕಿಸ್ತಾನಕ್ಕೆ ಪರಾರಿಯಾಗದಂತೆ ಕಣ್ಗಾವಲು ಇಡಲು ನಿರ್ದೇಶನ ನೀಡಲಾಯಿತು. ಉಗ್ರರ ಉಪಸ್ಥಿತಿ ಬಗ್ಗೆ ನಮಗೆ ಜುಲೈ 22ರಂದು ಖಚಿತ ಮಾಹಿತಿ ದೊರೆಯಿತು. ಆ ಬಳಿಕ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ವಿವರ ನೀಡಿದರು.

ಪಹಲ್ಗಾಮ್ ದಾಳಿಯ ಎರಡು ದಿನಗಳ ನಂತರ, ಪ್ರಧಾನಿ ಮೋದಿ ಅವರು ಬಿಹಾರಕ್ಕೆ ಭೇಟಿ ನೀಡಿದ್ದನ್ನು ಶಾ ಸಮರ್ಥಿಸಿಕೊಂಡರು. ‘ಮೋದಿ ಅವರ ಭಾಷಣವು ವಿರೋಧ ಪಕ್ಷಗಳು ಹೇಳುವಂತೆ ಚುನಾವಣಾ ಭಾಷಣವಲ್ಲ, ಬದಲಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡುವ 140 ಕೋಟಿ ಭಾರತೀಯರ ಸಂಕಲ್ಪದ ಪ್ರತಿಬಿಂಬ’ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಅವರ ನೀತಿಗಳಿಂದಾಗಿ ಪಾಕಿಸ್ತಾನ ಹಾಗೂ ಚೀನಾಕ್ಕೆ ಇನ್ನಷ್ಟು ಬಲ ಬಂತು ಎಂದರು.

1948ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಪಡಿಸಿಕೊಳ್ಳಲು ಭದ್ರತಾ ಪಡೆಗಳು ಸಜ್ಜಾಗಿದ್ದವು. ಆಗ ನೆಹರೂ ಅವರು ಏಕಾಏಕಿ ಕದನ ವಿರಾಮ ಘೋಷಿಸಿದ್ದರು. 1971ರಲ್ಲಿ ಇಂದಿರಾ ಅವರು ಪಿಒಕೆಯನ್ನು ವಾಪಸ್ ಪಡೆಯಲಿಲ್ಲ. ಮನಮೋಹನ್ ಸಿಂಗ್ ಕಾಲದಲ್ಲಿ 27 ಉಗ್ರರ ದಾಳಿಗಳು ನಡೆದಿದ್ದವು ಎಂದ ಅವರು, ‘ಕಾಂಗ್ರೆಸ್ ಸರ್ಕಾರ ಮಾಡಿದ್ದೇನು? ಅವರು ಪಾಕಿಸ್ತಾನಕ್ಕೆ ಕೇವಲ ದಾಖಲೆಗಳನ್ನಷ್ಟೇ ಕಳುಹಿಸಿದ್ದಾರೆ. ಪೋಟಾವನ್ನು ವಿರೋಧಿಸುವವರು ನರೇಂದ್ರ ಮೋದಿ ಅವರ ಭಯೋತ್ಪಾದನಾ ವಿರೋಧಿ ನೀತಿಗಳನ್ನು ಎಂದಿಗೂ ಮೆಚ್ಚುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.