ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

Published 12 ಸೆಪ್ಟೆಂಬರ್ 2023, 4:44 IST
Last Updated 12 ಸೆಪ್ಟೆಂಬರ್ 2023, 4:44 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.

ಗುಪ್ತಚರದ ನಿಖರ ಮಾಹಿತಿ ಬೆನ್ನಲ್ಲೇ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದೆ. ಯುಎಇನ ಜೆಬೆಲ್ ಅಲಿ ಬಂದರಿಂದ ಸರಕುಗಳು ಆಮದುಗೊಂಡಿತ್ತು ಎಂದು ತಿಳಿದು ಬಂದಿದೆ.

ಈ ವಸ್ತುಗಳಲ್ಲಿ ಹೆಚ್ಚಿನವು ಯುರೋಪ್ ಅದರಲ್ಲೂ ವಿಶೇಷವಾಗಿ ಬ್ರಿಟನ್, ನೆದರ್ಲೆಂಡ್ಸ್‌‌ಗೆ ಸೇರಿದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕಾರ್ಯಾಚರಣೆಯ ಮೂಲಕ ಜಾಗತಿಕ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಡಿಆರ್‌ಐ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಪ್ರಾಚೀನ ಪ್ರತಿಮೆ, ವರ್ಣಚಿತ್ರಗಳು, ಪುರಾತನ ಪಿಠೋಪಕರಣಗಳನ್ನು ಸೇರಿದಂತೆ ಬೆಲೆಬಾಳುವ ಪಾರಂಪರಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಹಲವಾರು ವಸ್ತುಗಳು ಅಮೂಲ್ಯವಾದ ಕಲ್ಲು, ಚಿನ್ನ, ಬೆಳ್ಳಿಯಿಂದ ಮಾಡಲ್ಪಟ್ಟಿದ್ದು ಅಥವಾ ಚಿನ್ನ/ಬೆಳ್ಳಿಯ ಲೇಪನವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT