ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

Published 20 ಜುಲೈ 2023, 7:01 IST
Last Updated 20 ಜುಲೈ 2023, 7:01 IST
ಅಕ್ಷರ ಗಾತ್ರ

ನವದೆಹಲಿ: ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಕಾರ್ಯಕ್ಷಮತೆಗೆ ಅರ್ಜೆಂಟೀನಾ ರಕ್ಷಣಾ ಸಚಿವ ಮನಸೋತಿದ್ದಾರೆ. ಖರೀದಿಸಲೂ ಮುಂದಾಗಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ ಬಿಡಿಭಾಗಗಳು ಅರ್ಜೆಂಟೀನಾದ ಚಿಂತೆಗೆ ಕಾರಣವಾಗಿವೆ.

ಬಹಳಾ ಪ್ರಸಿದ್ಧಿ ಪಡೆದಿರುವ ಎಚ್‌ಎಎಲ್‌ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ಅರ್ಜೆಂಟೀನಾ ಜತೆಗೆ ಈಜಿಪ್ಟ್‌ ಕೂಡಾ ಈ ಯುದ್ಧ ವಿಮಾನಕ್ಕಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದೆ.

ತೇಜಸ್ ಖರೀದಿಗಾಗಿಯೇ ಭಾರತಕ್ಕೆ ಬಂದಿರುವ ಅರ್ಜೆಂಟೀನಾದ ರಕ್ಷಣಾ ಸಚಿವ ಜಾರಜ್‌ ಎನ್ರಿಕ್‌ ಟಿಯಾನಾ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದಾರೆ. ತೇಜಸ್ ಖರೀದಿಗೂ ಉತ್ಸುಕತೆ ತೋರಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾದ 16 ಬಿಡಿಭಾಗಗಳ ಕುರಿತು ಅರ್ಜೆಂಟೀನಾ ಮರುಚಿಂತನೆ ನಡೆಸಿದೆ.

ಇದು ಬ್ರಿಟನ್ ಮತ್ತು ಅರ್ಜೆಂಟೀನಾ ನಡುವಿನ 1982ರಲ್ಲಿ ಸಂಭವಿಸಿದ ಕಹಿ ಘಟನೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಫಾಕ್‌ಲ್ಯಾಂಡ್‌ ಎಂಬ ದ್ವೀಪ ವಿಷಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ವೈಮನಸ್ಸು ಉಂಟಾಗಿತ್ತು. ಅಲ್ಲಿಂದ ಕಾಂಬ್ಯಾಟ್ ಜೆಟ್‌ ಹಾಗೂ ತಾನು ತಯಾರಿಸಿದ ಯಾವುದೇ ಸಂಬಂಧಿತ ಉಪಕರಣಗಳನ್ನು ಅರ್ಜೆಂಟೀನಾಗೆ ನೀಡುತ್ತಿಲ್ಲ. ಹೀಗಾಗಿ ಬ್ರಿಟನ್‌ನ ಒಂದೇ ಒಂದು ಬಿಡಿಭಾಗ ಇದ್ದರೂ ಅದನ್ನು ಖರೀದಿಸಲು ಅರ್ಜೆಂಟೀನಾ ಹಿಂದೇಟು ಹಾಕುತ್ತಿದೆ.

ತೇಜಸ್‌ ಖರೀದಿಗಾಗಿಯೇ ಬಂದಿದ್ದ ಅರ್ಜೆಂಟೀನಾ ರಕ್ಷಣಾ ವಿಭಾಗದ ತಂಡವು ತೇಜಸ್ ಯುದ್ಧ ವಿಮಾನವನ್ನು ಎರಡು ಬಾರಿ ಹಾರಿಸಿ ಪರೀಕ್ಷಿಸಿದೆ. ಅದರ ಕಾರ್ಯಕ್ಷಮತೆ ಕುರಿತು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್ ಬಿಡಿಭಾಗಗಳಾದ ಕ್ವಾರ್ಟ್ಜ್‌ ನೋಸ್‌ ಕೋನ್ಸ್‌, ಡನ್‌ಲಪ್‌ ಟೈರ್‌ಗಳು, ಲೈನ್‌ ರಿಪ್ಲೇಸಬಲ್‌ ಯೂನಿಟ್ಸ್‌ (ಎಲ್‌ಆರ್‌ಯು)ಗಳನ್ನು ಬ್ರಿಟಿಷ್ ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗಿದೆ.

ಆದರೆ ಈ ಬಿಡಿ ಭಾಗಗಳನ್ನು ಬದಲಿಸಿ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳುವುದು ಎಷ್ಟು ಸಾಧ್ಯ ಎಂಬುದು ಈಗ ಚರ್ಚಿತ ವಿಷಯವಾಗಿದೆ. ಒಂದೊಮ್ಮೆ ಅರ್ಜೆಂಟೀನಾ ಹೆಚ್ಚಿನ ಸಂಖ್ಯೆಯ ವಿಮಾನ ಖರೀದಿಸಿದರೆ ಎಚ್‌ಎಎಲ್ ಬ್ರಿಟನ್ ಬಿಡಿ ಭಾಗಗಳನ್ನು ಕೈಬಿಡಲಿದೆಯೇ? ಎಂಬುದರ ಕುರಿತು ರಕ್ಷಣಾ ವಲಯದಲ್ಲಿ ಚರ್ಚೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT