ಐಇಡಿಯನ್ನು ಶಾಲೆಯ ಕಟ್ಟಡದೊಳಗೆ ಉಗ್ರರು ಹುದುಗಿಸಿಟ್ಟಿದ್ದ ಕಾರಣ, ಸ್ಫೋಟದ ತೀವ್ರತೆಗೆ ಶಾಲೆಯ ಕಟ್ಟಡವೂ ಹಾನಿಗೊಂಡಿದೆ. ಘಟನೆ ನಡೆದ ಬೆನ್ನಲ್ಲೇ ಸೇನೆಯು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ಶೋಧಕಾರ್ಯ ಆರಂಭಿಸಿದೆ. ಈ ವರ್ಷದಲ್ಲಿ ಇಲ್ಲಿಯವರೆಗೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಯಾವುದೇ ಎನ್‌ಕೌಂಟರ್ ನಡೆದಿಲ್ಲ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ 225 ಉಗ್ರರು ಹತ್ಯೆಯಾಗಿದ್ದರೆ, ಭದ್ರತಾ ಪಡೆಯ 60 ಸಿಬ್ಬಂದಿ ಹುತಾತ್ಮರಾಗಿದ್ದರು. 2019ರಲ್ಲಿ 157 ಹಾಗೂ 2018ರಲ್ಲಿ 257 ಉಗ್ರರರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು.