ಇಟಾನಗರ್ : ಭಾರತಕ್ಕೆ ತಾಂತ್ರಿಕವಾಗಿ ಆಯಕಟ್ಟಿನ ಸ್ಥಳವಾಗಿರುವ ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಪೆನೆ-ಟಾಟೊವಿನಲ್ಲಿ 32 ಕಿಮೀ ಉದ್ದದ ದ್ವಿಪಥ ರಸ್ತೆಯ ಕಾಮಗಾರಿ 2026ರ ಮಾರ್ಚ್ಗೆ ಪೂರ್ಣಗೊಳ್ಳಲಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ, ಬ್ರಹ್ಮಾಂಕ್ ಯೋಜನೆಯ ಮುಖ್ಯ ಎಂಜಿನಿಯರ್ ಎಸ್.ಸಿ ಲೂನಿಯಾ ಹೇಳಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬವಾದ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಶೀಘ್ರದಲ್ಲೇ ಸಿಯಾಂಗ್ ಜಿಲ್ಲೆಯ ಕಾಯಿಂಗ್ನಿಂದ ಟಾಟೊಗೆ ಎಲ್ಲಾ ಹವಾಮಾನದಲ್ಲಿ ಸಂಪರ್ಕವನ್ನು ಕಲ್ಪಿಸುವ ರಸ್ತೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಟಾಟೊದ ದೂರದ ಪ್ರದೇಶಗಳಿಗೆ NH-13 ಮಾರ್ಗವನ್ನು ವಿಸ್ತರಿಸಲಾಗುತ್ತದೆ ಎಂದು ಲೂನಿಯಾ ಹೇಳಿದರು.

ಟಾಟೊ-ಮೆಚುಕಾ ಮಾರ್ಗದಲ್ಲಿ 14 ಸೇತುವೆಗಳನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಸೇತುವೆಗಳ ನಿರ್ಮಾಣ ಕಾರ್ಯವು ವಿವಿಧ ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿವೆ ಎಂದು ಲೂನಿಯಾ ಹೇಳಿದರು.

ಯಾರ್ಲುಂಗ್-ಟ್ರೈಜಂಕ್ಷನ್ನ 12 ಕಿ.ಮೀ. ರಸ್ತೆಯ ಕೆಲಸ ಪ್ರಾರಂಭವಾಗಿದೆ. ಈ ಮಾರ್ಗದಲ್ಲಿ 140 ಅಡಿ ಎತ್ತರದ ಉಕ್ಕಿನ ಮಾಡ್ಯುಲರ್ ಸೇತುವೆಯ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಯಾರ್ಲುಂಗ್-ಲಮಾಂಗ್ನ 16 ಕಿ.ಮೀ. ರಸ್ತೆ ಹಾಗೂ ಲಮಾಂಗ್-ಲೋಲಾದ 14 ಕಿ.ಮೀ. ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಏಕ ಪಥ ರಸ್ತೆ (ಎನ್ಎಚ್ಎಲ್ಎಸ್) ಸಂಸ್ಥೆಯಡಿಯಲ್ಲಿ ಈ ರಸ್ತೆಗಳು ನಿರ್ಮಾಣವಾಗುತ್ತಿವೆ. ಮುಂದಿನ ದಿನಗಳಲ್ಲಿ ವಿವಿಧ ಭಾಗಗಳಲ್ಲಿರುವ ಭಾರತೀಯ ಪಡೆಗಳ ಸೈನಿಕ ಶಿಬಿರಗಳಿಗೆ ಸಂರ್ಪಕವನ್ನು ಕಲ್ಪಿಸಲಾಗುವುದು ಎಂದು ಲೂನಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.