ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ: ಪೊಲೀಸ್ ವಶದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿದ ಸಾಮೂಹಿಕ ಅತ್ಯಾಚಾರ ಆರೋಪಿ

Published 24 ಆಗಸ್ಟ್ 2024, 5:03 IST
Last Updated 24 ಆಗಸ್ಟ್ 2024, 5:03 IST
ಅಕ್ಷರ ಗಾತ್ರ

ಗುವಾಹಟಿ: ನಾಗಾಂವ್‌ ಜಿಲ್ಲೆಯ ಧೀಂಗ್‌ ಎಂಬಲ್ಲಿ 14 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತಫುಜಲ್‌ ಇಸ್ಲಾಂ ಎಂಬಾತ ಪೊಲೀಸರ ವಶದಲ್ಲಿ ಇರುವಾಗಲೇ ತಪ್ಪಿಸಿಕೊಂಡು ಕೆರೆಗೆ ಹಾರಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಬಾಲಕಿಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಉಳಿದ ಇಬ್ಬರು ಆರೋಪಿಗಳು ಕಾಣೆಯಾಗಿದ್ದಾರೆ. ಅತ್ಯಾಚಾರ ಎಸಗಿದ ಬಳಿಕ ಅರೆಪ್ರಜ್ಞಾವಸ್ಥೆ
ಯಲ್ಲಿದ್ದ ಬಾಲಕಿಯನ್ನು ಹತ್ತಿರದ ಕೆರೆಯ ಬಳಿ ಮೂವರೂ ಬಿಸಾಡಿದ್ದರು. ಈ ಕೆರೆಯ ಬಳಿಗೆ ಘಟನೆಯ
ಮರುಸೃಷ್ಟಿ ಮಾಡಿಸಲು ಬೆಳಿಗ್ಗೆ 3.30ರ ಸುಮಾರಿಗೆ ಆರೋಪಿಯನ್ನು
ಪೊಲೀಸರು ಕರೆತಂದಿದ್ದರು.

‘ಈ ವೇಳೆ ಆರೋಪಿಯ ಕೈಗೆ ಕೋಳ ತೊಡಿಸಲಾಗಿತ್ತು. ಆರೋಪಿಯ ಜೊತೆಯಿದ್ದ ಪೊಲೀಸರ ವಶದಿಂದ ತಪ್ಪಿಸಿಕೊಂಡ ಆರೋಪಿಯು ಕೆರೆಗೆ ಹಾರಿದ. ತಕ್ಷಣವೇ ಎಸ್‌ಡಿಆರ್‌ಎಫ್‌ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಎರಡು ತಾಸಿನ ನಂತರ ಆರೋಪಿಯ ಮೃತದೇಹ ದೊರೆಯಿತು. ಒಬ್ಬ ಸಿಬ್ಬಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನಾಗಾಂವ್‌ನ ಎಸ್‌ಪಿ ಮಾಹಿತಿ ನೀಡಿದರು.

ಗ್ರಾಮದಿಂದ ಬಹಿಷ್ಕಾರ

ಆತ್ಯಹತ್ಯೆ ಮಾಡಿಕೊಂಡ ಆರೋಪಿ ತಫುಜಲ್‌ ಇಸ್ಲಾಂ ನಾಗಾಂವ್‌ ಜಿಲ್ಲೆಯ ಬೆರ್‌ಭೇಟಿ ಗ್ರಾಮದವನು. ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಸಭೆ ಸೇರಿದ್ದಾರೆ. ಯುವಕನ ಕೃತ್ಯವನ್ನು ಖಂಡಿಸಿ, ಆತನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ, ಘಟನೆಯನ್ನು ಖಂಡಿಸಿ ಗ್ರಾಮದ ಮಸೀದಿಯಿಂದ ಗ್ರಾಮಸ್ಥರು ಮೆರವಣಿಗೆಯನ್ನೂ ನಡೆಸಿದ್ದಾರೆ.

‘ನಮ್ಮ ಗ್ರಾಮದ ಸ್ಮಶಾನದಲ್ಲಿ ಈತನ ಮೃತದೇಹವನ್ನು ಹೂಳಲು ಬಿಡುವುದಿಲ್ಲ. ಆತನ ‘ಜನಾಝ’ಗೂ (ಮೃತದೇಹವನ್ನು ಹೂಳುವುದಕ್ಕೂ ಮೊದಲು ಮಾಡುವ ಪ್ರಾರ್ಥನೆ) ನಾವು ಹೋಗುವುದಿಲ್ಲ. ಈ ಹುಡುಗನ ಕೃತ್ಯದಿಂದ ನಾವು ತಲೆ ತಗ್ಗಿಸುವಂತಾಗಿದೆ’ ಎಂದು ಗ್ರಾಮದ ಹಿರಿಯರಾದ ಮೊಹಮ್ಮದ್‌ ಶಹಜಾನ್‌ ಅಲಿ ಚೌಧರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT