ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುವ ಮೂಲಕ 4 ದಶಕಗಳ ರಾಮಮಂದಿರ ಹೋರಾಟಕ್ಕೆ ತೆರೆಬಿದ್ದಿತ್ತು. ಈ ಸ್ಥಳದಲ್ಲಿ 1992ರವರೆಗೆ 16ನೇ ಶತಮಾನದಲ್ಲಿ ನಿರ್ಮಾಣಗೊಂಡ ಬಾಬರಿ ಮಸೀದಿ ಇತ್ತು. 1992ರ ಡಿಸೆಂಬರ್ 6ರಂದು ಹಿಂದೂ ಬಲಪಂಥೀಯ ಗುಂಪು ಮಸೀದಿಯನ್ನು ಕೆಡವಿತ್ತು. ಈ ಘಟನೆಯಾಗಿ ಇಂದಿಗೆ 33 ವರ್ಷಗಳು ಪೂರ್ಣಗೊಂಡಿದೆ.

ಬಾಬರಿ ಮಸೀದಿಯನ್ನು ಮೊದಲ ಮೊಘಲ್ ದೊರೆ ಬಾಬರ್ ಅವಧಿಯಲ್ಲಿ ದೇವಾಲಯವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ, ಅದು ರಾಮನ ಜನ್ಮ ಸ್ಥಳವಾಗಿತ್ತು ಎಂಬುದು ಹಿಂದೂಗಳ ವಾದವಾಗಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಭೂಮಿಯ ಮಾಲೀಕತ್ವವನ್ನು ಹಿಂದೂ ಟ್ರಸ್ಟ್ಗೆ ನೀಡಿತ್ತು. ಇದಾದ ಬಳಿಕ ಇದೇ ಅಯೋಧ್ಯೆಗೆ ಸಮೀಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಪರ್ಯಾಯ ಭೂಮಿ ಒದಗಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸುಪ್ರಿಂಕೋರ್ಟ್ ಆದೇಶದ ಅನ್ವಯ, ಬಾಬರಿ ಮಸೀದಿ ಸ್ಥಳವಿದ್ದ ಜಾಗಕ್ಕೆ ಪರಿಹಾರವಾಗಿ ಮಸೀದಿ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ 2020ರಲ್ಲಿ ಅಯೋಧ್ಯೆ ಜಿಲ್ಲೆಯ ಸೊಹಾವಾಲ್ನ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಉತ್ತರ ಪ್ರದೇಶ ಸರ್ಕಾರ ವಕ್ಫ್ ಮಂಡಳಿಗೆ ಮಂಜೂರು ಮಾಡಿತ್ತು.

ಸ್ಥಳದ ವಿವರ

ಧನ್ನಿಪುರ, ಅಯೋಧ್ಯೆ ಪಟ್ಟಣದ ಕೇಂದ್ರ ಸ್ಥಾನದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಸದ್ಯ, ಉತ್ತರ ಪ್ರದೇಶ ಸರ್ಕಾರ ನೀಡಿರುವ ಸ್ಥಳದಲ್ಲಿ ಸುನ್ನಿ ವಕ್ಫ್ ಮಂಡಳಿ, ಮಸೀದಿ ಮತ್ತು ಆಸ್ಪತ್ರೆ ಒಳಗೊಂಡಿರುವ ಕಟ್ಟಡ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನವನ್ನು ರಚಿಸಿದೆ. ಆದರೆ, ಸೆಪ್ಟೆಂಬರ್ 2025ರವರೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರಗಳು ಕಾಣೆಯಾಗಿದ್ದರಿಂದ ನಿರ್ಮಾಣ ಯೋಜನೆಯನ್ನು ತಿರಸ್ಕರಿಸಿತು. ಸದ್ಯ, ಸುಪ್ರಿಂಕೋರ್ಟ್ ತೀರ್ಪು ಬಂದು 6 ವರ್ಷ ಕಳೆದರೂ ವಕ್ಫ್ ಬೋರ್ಡ್ ನಿರ್ಮಿಸಲು ಮುಂದಾಗಿರುವ ಯೋಜನೆಯು ಇನ್ನೂ ವಿನ್ಯಾಸ ಮತ್ತು ಅನುಮೋದನೆ ಹಂತದಲ್ಲಿಯೇ ಉಳಿದಿದ್ದು, ಕಾಮಗಾರಿ ಆರಂಭಗೊಂಡಿಲ್ಲ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಭೂಮಿ ಹಂಚಿಕೆ ಮಾಡಲಾಗಿದೆ. ವಕ್ಫ್ ಮಂಡಳಿಯು ಸ್ವಾಧೀನಪಡಿಸಿಕೊಳ್ಳಲು ಸ್ಟಾಂಪ್ ಡ್ಯೂಟಿ ಪಾವತಿಸಿದೆ. ಇದು ವಕ್ಫ್ ಕಾಯ್ದೆಯ ತತ್ವಗಳನ್ನು ಉಲ್ಲಂಘನೆಉಯಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಆಕ್ಷೇಪಣೆಗಳನ್ನು ಎತ್ತಿದೆ.

ಈ ಸ್ಥಳದಲ್ಲಿ ವಕ್ಫ್ ಮಂಡಳಿ ತನ್ನ ಕಾರ್ಯ ಆರಂಭಿಸಿದರೆ ಕೋಮು ಸಾಮರಸ್ಯ ಕಾಪಾಡುವುದಾಗಿ ಸರ್ಕಾರ ಭರವಸೆ ನೀಡಿದೆ.
.Rama Mandira: ಅಯೋಧ್ಯೆ ರಾಮ ಮಂದಿರ ಶಿಖರವೇರಿದ ಧ್ವಜದಲ್ಲಿ ಇರುವುದೇನು?.1528ರಿಂದ 2024: ಬಾಬರಿ ಮಸೀದಿಯಿಂದ ರಾಮ ಮಂದಿರ ನಿರ್ಮಾಣದವರೆಗಿನ ಚಿತ್ರಣ .
ಯೋಜನೆಯ ಮೇಲ್ವಿಚಾರಣೆ ಮಾಡುತ್ತಿರುವ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ (IICF), ಈ ಹಿಂದೆ ರೂಪಿಸಿದ್ದ ಅಂಡಾಕಾರದ ನಕ್ಷೆಯನ್ನು ಬದಲಿಸಿ 5 ಮಿನಾರ್ಗಳು ಮತ್ತು ಗುಮ್ಮಟ ಒಳಗೊಂಡ ಹೊಸ ಸಾಂಪ್ರದಾಯಿಕ ವಾಸ್ತುಶಿಲ್ಪ ವಿನ್ಯಾಸವನ್ನು ಅಂತಿಮಗೊಳಿಸಿದೆ. ಈ ಯೋಜನೆಯ ಅನ್ವಯ ಈ ತಿಂಗಳು ಅಥವಾ 2026ರ ಆರಂಭದಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.