ಚುನಾವಣೆ ವೇಳೆ ಕೂಡ ಆರ್‌ಜೆಡಿ–ಕಾಂಗ್ರೆಸ್ ಹೋರಾಡುತ್ತಿದ್ದವು ಈಗಲೂ ಮುಂದುವರಿದಿದೆ. ಮೈತ್ರಿಕೂಟಕ್ಕೆ ಸೈದ್ದಾಂತಿಕ ಹಿನ್ನೆಲೆಯೂ ಇಲ್ಲ ಜನರ ಒಳಿತಿಗಾಗಿ ಬದ್ಧತೆಯೂ ಇಲ್ಲ
ಸೈಯದ್ ಶಹನವಾಜ್ ಹುಸೇನ್ ಬಿಜೆಪಿ ರಾಷ್ಟ್ರೀಯ ವಕ್ತಾರ
ಸೀಟು ಹಂಚಿಕೆ ಗೊಂದಲ:
ಮತದಾನದ ಹಿಂದಿನ ದಿನದವರೆಗೂ ಮಹಾಘಟಬಂಧನದಲ್ಲಿ ಸೀಟು ಹಂಚಿಕೆ ಸುಸೂತ್ರವಾಗಿ ನಡೆದಿರಲಿಲ್ಲ. ಡಜನ್‌ಗೂ ಅಧಿಕ ಕ್ಷೇತ್ರಗಳಲ್ಲಿ ಪರಸ್ಪರ ‘ಸ್ನೇಹ’ದ ಹೋರಾಟಗಳನ್ನು ನಡೆಸಿದ್ದು ಕೂಡ ಸೋಲಿಗೆ ಕಾರಣವಾಯಿತು ಎಂದು ಉಭಯ ಪಕ್ಷಗಳ ಮುಖಂಡರು ಒಪ್ಪಿಕೊಂಡಿದ್ದಾರೆ.