ಪಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ನಾಳೆ (ಮಂಗಳವಾರ) ಎರಡನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದಾರೆ.

ಮೊದಲ ಹಂತದಲ್ಲಿ ಮತ ಚಲಾಯಿಸಿದ ಮತದಾರರ ಲಿಂಗಾಧಾರಿತ ಅಂಕಿ–ಅಂಶ ಈವರೆಗೂ ಬಿಡುಗಡೆ ಮಾಡಿಲ್ಲ ಎಂದು ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಮತದಾನ ನಡೆದು ನಾಲ್ಕು ದಿನ ಕಳೆದರೂ ಏಕೆ ಅಂಕಿ–ಅಂಶ ಬಿಡುಗಡೆ ಮಾಡಲಿಲ್ಲ. ಈ ರೀತಿ ಎಂದೂ ನಡೆದಿರಲಿಲ್ಲ. ಮತದಾನ ಬಳಿಕ ತಕ್ಷಣವೇ ಅಂಕಿ–ಅಂಶವನ್ನು ಪ್ರಕಟಿಸಲಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
.ತಮಿಳು ನಟ ಅಭಿನಯ್ ಕಿಂಗರ್ ನಿಧನ.ಬಿಗ್ಬಾಸ್ನಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು: ಧ್ರುವಂತ್.
ಬಿಹಾರದ ನಿರುದ್ಯೋಗ ಮತ್ತು ವಲಸೆಯಂತಹ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಂದೂ ಮಾತನಾಡಲಿಲ್ಲ. ಚುನಾವಣಾ ಪ್ರಚಾರದ ವೇಳೆ ಅಭಿವೃದ್ಧಿ ವಿಚಾರಗಳ ಹೊರತಾಗಿ ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದ್ದರು ಎಂದು ತೇಜಸ್ವಿ ಟೀಕಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದರೆ ಕೋಮು ಶಕ್ತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ತೇಜಸ್ವಿ ತಿಳಿಸಿದ್ದಾರೆ.

ಬಿಹಾರದ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಬಾಕಿ 122 ಸ್ಥಾನಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ
.ಜಮ್ಮು ಪೊಲೀಸರ ಕಾರ್ಯಾಚರಣೆ: ಇಬ್ಬರು ವೈದ್ಯರು ಸೇರಿ 7 ಮಂದಿ ಉಗ್ರರ ಬಂಧನ .ದೋಣಿಯಲ್ಲೇ ಚಹಾ ಅಂಗಡಿ ತೆರೆದ ವೃದ್ಧೆ; ನೆಟ್ಟಿಗರ ಮೆಚ್ಚುಗೆ.ಮಸ್ಕಿ: ಅವ್ಯವಹಾರ– ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ಸದಸ್ಯತ್ವ ರದ್ದು.ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್ಗೆ ಗಂಭೀರ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.