ಕೋಲ್ಕತ್ತ: ಕವರ್ ಡ್ರೈವ್ ಹೇಗಿರಬೇಕು, ಬೌಲಿಂಗ್ನ ಲೈನ್ ಮತ್ತು ಲೆಂತ್ ಹೇಗಿದ್ದರೆ ಉತ್ತಮ, ಈವರೆಗಿನ ಕ್ರಿಕೆಟ್ನ ಕೆಲ ಪ್ರಮುಖ ಹೊಡೆತಗಳಿಂದ ಕಲಿಯಬಹುದಾದದ್ದೇನು? ಇವೆಲ್ಲಾ ಮಾಹಿತಿಗಳೊಂದಿಗೆ ಹೊಸತನ್ನು ಕಲಿಸಲು ಕೃತಕ ಬುದ್ಧಿಮತ್ತೆ ‘ಕಬುನಿ’ ಸಜ್ಜಾಗಿದೆ.

ಬ್ರಿಟನ್ ಮೂಲದ ಕಬುನಿಯನ್ನು ಸ್ಮಾರ್ಟ್ ಫೋನ್ ಅಥವಾ ತನ್ನದೇ ಆದ ಸಾಧನದ ಮೂಲಕ ಮಾಹಿತಿ ಪಡೆದು ಆಟವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಕಬುನಿ ಕ್ರಿಕೆಟ್ ತರಬೇತಿ ಆ್ಯಪ್ನ ರಾಯಭಾರಿಯಾಗಿ ನೇಮಕಗೊಂಡ ಅವರು ಮಾತನಾಡಿ, ‘ದಶಕಗಳ ಕ್ರಿಕೆಟ್ ಮಾಹಿತಿ, ಕ್ರಿಕೆಟಿಗರ ಆಟದ ವೈಖರಿ ಮತ್ತು ತರಬೇತುದಾರರ ಜ್ಞಾನವನ್ನು ಪ್ರತಿಯೊಬ್ಬರ ವೈಯಕ್ತಿಕ ಮಟ್ಟಕ್ಕೆ ವಿನ್ಯಾಸಗೊಳಿಸಿ ನೀಡುವ ಸಾಮರ್ಥ್ಯ ಈ ಕೃತಕ ಬುದ್ಧಿಮತ್ತೆ ಕಬುನಿಗಿದೆ. ವಿಡಿಯೊ, ಚಿತ್ರ, ಅಕ್ಷರ ಮತ್ತು ಧ್ವನಿ ಮೂಲಕ ಇದು ಆಟವನ್ನು ಉತ್ತಮಪಡಿಸಿಕೊಳ್ಳಲು ಮಾಹಿತಿ ನೀಡಲಿದೆ’ ಎಂದಿದ್ದಾರೆ.

‘ಕೃತಕ ಬುದ್ಧಿಮತ್ತೆ ಆಧಾರಿತ ಈ ಸಾಧನದ ಮೂಲಕ ಗುಣಮಟ್ಟದ ತರಬೇತಿಯನ್ನು ಮಕ್ಕಳು ಪಡೆಯಬಹುದು. ಇದರಿಂದ ತ್ವರಿತವಾಗಿ ಆಟದ ಕಲಿಕೆ ಮತ್ತು ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ. ಇಂಥ ಗುಣಮಟ್ಟದ ತರಬೇತಿಯು ವೃತ್ತಿಪರರಿಗೆ ಮಾತ್ರ ಲಭ್ಯ ಎಂಬ ಮಾತಿತ್ತು. ಆದರೆ, ಕೃತಕ ಬುದ್ಧಿಮತ್ತೆ ಮೂಲಕ ಇದು ಎಲ್ಲರಿಗೂ ಲಭ್ಯವಾಗಲಿದೆ’ ಎಂದು ಗಂಗೂಲಿ ಹೇಳಿದ್ದಾರೆ.

‘ಕೇಂಬ್ರಿಜ್ನ ತಜ್ಞರೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪನಿಯು ವಿನ್ಯಾಸಕ್ಕೆ ಅವರ ನೆರವು ಪಡೆದಿದೆ. ಕ್ರಿಕೆಟ್ನಿಂದ ಆರಂಭಗೊಂಡು, ಟೆನಿಸ್, ಗಾಲ್ಫ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಸೇರಿದಂತೆ ಇನ್ನೂ ಹಲವು ಕ್ರೀಡೆಗಳ ತರಬೇತಿ ನೀಡುವಂತೆ ತಮ್ಮ ಸಾಧನವನ್ನು ಅಭಿವೃದ್ಧಿಪಡಿಸುವ ಯೊಜನೆ ಇದೆ. ಆ ಮೂಲಕ ಹಲವು ಕ್ರೀಡೆಗಳ ಕಲಿಕೆಗೆ ಒಂದು ವೇದಿಕೆ ಕಲ್ಪಿಸುವುದು, ಆರೋಗ್ಯ ಕಾಳಜಿ, ಸಮುದಾಯ ಪಾಲುದಾರಿಕೆ ಮತ್ತು ಪ್ರತಿನಿತ್ಯ ಫಿಟ್ನೆಸ್ಗೆ ನೆರವಾಗಲು ಕಬುನಿ ಸಜ್ಜಾಗಿದೆ’ ಎಂದು ಗಂಗೂಲಿ ಹೇಳಿದ್ದಾರೆ.

ಕಬುನಿ ಸಂಸ್ಥಾಪಕ ಹಾಗೂ ಸಿಇಒ ನಿಮೇಶ್ ಪಟೇಲ್ ಮಾತನಾಡಿ, ‘ಭಾರತದಲ್ಲಿ ಕ್ರೀಡೆ ಕುರಿತ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2030ರ ಕಾಮನ್ವೆಲ್ತ್ ಗೇಮ್ಸ್ ಹಾಗೂ 2036ರ ಒಲಿಂಪಿಕ್ಸ್ಗೆ ಭಾರತ ಸಜ್ಜಾಗುತ್ತಿದೆ. ಆ ನಿಟ್ಟಿನಲ್ಲಿ ನೂರು ಕೋಟಿ ಕ್ರೀಡಾಸಕ್ತರಿಗೆ ಸ್ಫೂರ್ತಿಯಾಗಲು ಸಜ್ಜಾಗಿದೆ. ಭವಿಷ್ಯಕ್ಕಾಗಿ ಎಲ್ಲರೂ ಜತಗೂಡಿ ಆಡುವ ಮತ್ತು ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಬೇಕೆಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕಂಪನಿಯ ಆದಾಯದ ಶೇ 1ರಷ್ಟನ್ನು ದೇಶದಲ್ಲಿ ಕ್ರೀಡೆಯನ್ನು ಬೇರುಮಟ್ಟದಿಂದ ಬೆಳೆಸಲು ಪ್ರೋತ್ಸಾಹಿಸಲು ವಿನಿಯೋಗಿಸಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.