ಪಟ್ನಾ: 'ಬಿಹಾರದಲ್ಲಿ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಖಾತ್ರಿಪಡಿಸುವ ಕಾಯ್ದೆ ಜಾರಿಗೆ ತರಲು ಬದ್ಧರಾಗಿದ್ದೇವೆ' ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಗುರುವಾರ) ಭರವಸೆ ನೀಡಿದ್ದಾರೆ.

ಬಿಹಾರ ಚುನಾವಣಾ ಹೊಸ್ತಿಲಲ್ಲಿರುವಂತೆಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ತೇಜಸ್ವಿ, 'ಬಿಹಾರದಲ್ಲಿ ತಮ್ಮ ಪಕ್ಷ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ದೊರಕುವ ಹಾಗೆ ಕಾನೂನು ತರಲಾಗುವುದು' ಎಂದು ವಾಗ್ದಾನ ನೀಡಿದ್ದಾರೆ.

'ಹೊಸ ಸರ್ಕಾರ ರಚನೆಯಾದ 20 ದಿನದೊಳಗೆ ಕಾಯ್ದೆ ಜಾರಿಗೆ ತರಲಾಗುವುದು' ಎಂದೂ ಅವರು ಹೇಳಿದ್ದಾರೆ.

'ಕಳೆದ 20 ವರ್ಷಗಳಲ್ಲಿ ಯುವಜನತೆಗೆ ಉದ್ಯೋಗ ನೀಡಲು ಎನ್ಡಿಎಗೆ ಸಾಧ್ಯವಾಗಲಿಲ್ಲ. ನಾವು ಅಧಿಕಾರಕ್ಕೆ ಬಂದ 20 ದಿನದೊಳಗೆ ಕಾಯ್ದೆ ರಚಿಸುತ್ತೇವೆ. 20 ತಿಂಗಳೊಳಗೆ ಅದನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.

'ಕಳೆದ ಬಾರಿಯೂ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದೆ. ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದಾಗ ಐದು ಲಕ್ಷ ಉದ್ಯೋಗಗಳನ್ನು ಒದಗಿಸಿದ್ದೆ. ನನಗೀಗ ಐದು ವರ್ಷಗಳ ಅವಧಿ ಸಿಕ್ಕಿದರೆ ಏನಾಗಬಹುದೆಂದು ನೀವೇ ಊಹಿಸಬಹುದು' ಎಂದಿದ್ದಾರೆ.
.ಬಿಹಾರ ಚುನಾವಣೆ | ಪ್ರಚಾರದ ವೇಳೆ ಎಐ ದುರ್ಬಳಕೆ ಬೇಡ: ಆಯೋಗ ಎಚ್ಚರಿಕೆ.ಬಿಹಾರ ಚುನಾವಣೆ: 51 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಪ್ರಶಾಂತ್ ಕಿಶೋರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.