ಅಮರಾವತಿ/ದುಬೈ: ಈ ದಶಕ ಪ್ರಧಾನಿ ನರೇಂದ್ರ ಮೋದಿ ಅವರದ್ದು, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಗೆಲ್ಲಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಕೇಂದ್ರದ ಎನ್ಡಿಎ ಸರ್ಕಾರ ಪ್ರಗತಿಪರ ಎಂದು ಬಣ್ಣಿಸಿರುವ ನಾಯ್ಡು, ಈ ದಶಕ ಮೋದಿ ಅವರದ್ದು, ಅವರ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದೆ. ಈ ಬಾರಿ ಬಿಹಾರ ಚುನಾವಣೆಯಲ್ಲೂ ಎನ್ಡಿಎ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
.ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ.ಕ್ಯಾಪ್ಟನ್ ಮಾತಿಗೂ ಕ್ಯಾರೆ ಎನ್ನದ ಅಶ್ವಿನಿ ಗೌಡ: ಬಿಗ್ಬಾಸ್ ನಿಯಮ ಉಲ್ಲಂಘನೆ.
ಮೋದಿ ಅವರು ಪ್ರಧಾನಿಯಾದ ಬಳಿಕ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯವಾಗಿ ಅಭಿವೃದ್ಧಿಯತ್ತ ಸಾಗಿದೆ. ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ದಶಕ ಮೋದಿ ಅವರದ್ದು ಎಂದಾದರೆ ಅದು ಭಾರತೀಯರಿಗೆ ಸೇರಿದ್ದು ಎಂದು ನಾಯ್ಡು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ 'ಸೂಪರ್ ಸಿಕ್ಸ್' ಚುನಾವಣಾ ಭರವಸೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. 'ಡಬಲ್ ಎಂಜಿನ್' ಸರ್ಕಾರದಿಂದಾಗಿ ಈ ಭರವಸೆಗಳು ಜಾರಿಗೆ ಬಂದವು ಎಂದು ನಾಯ್ಡು ತಿಳಿಸಿದ್ದಾರೆ.
.ಸವಿರುಚಿ: ಕೊಳ್ಳೇಗಾಲ ಮಟನ್ ಪಲಾವ್.. ಈ ರುಚಿಗೆ ಮನಸೋಲದವರಿಲ್ಲ! ಮಾಡುವ ವಿಧಾನ.Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ.
ಎನ್ಡಿಎ ಮೈತ್ರಿಕೂಟ ನಿರ್ಧರಿಸಿದರೆ ನಾನು ಸಹ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವೆ ಎಂದು ನಾಯ್ಡು ಹೇಳಿದ್ದಾರೆ.

243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸ್ಪರ್ಧಿಸಲಿವೆ. ಇನ್ನುಳಿದ ಸ್ಥಾನಗಳನ್ನು ಇತರೆ ಸಣ್ಣ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
.ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ.ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು...ದೆಹಲಿ | ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ; ಎಲ್ಲಾ ಶಾಲೆಗಳಿಗೂ ಏಕರೂಪ ನಿಯಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.