ಪಟ್ನಾ: ಬಿಹಾರದ ವಿಧಾನಸಭೆ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಚುನಾವಣಾ ಕಾರ್ಯತಂತ್ರ ರೂಪಿಸಿದ್ದು ಇದರ ಭಾಗವಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಆಡಳಿತರೂಢ ಎನ್ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರನ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೆ ಈ ಬಗ್ಗೆ ನಿತೀಶ್ ನೇತೃತ್ವದ ಸರ್ಕಾರ ಗಮನಹರಿಸುತ್ತಿಲ್ಲ, ಜನರ ಬಗ್ಗ ಕಾಳಜಿ ಹೊಂದಿಲ್ಲ ಎಂದು ಹೇಳಿದ್ದಾರೆ.
.BBK12: ಬಿಗ್ಬಾಸ್ ಮನೆಯಲ್ಲಿ ಜೋರಾಯ್ತು ಅಶ್ವಿನಿ–ಜಾಹ್ನವಿ ನಡುವೆ ಜಿದ್ದಾಜಿದ್ದಿ.ಹೊಸ ಲುಕ್ನಲ್ಲಿ ರಾಜ್ಯದ ಪಿಸಿ, ಎಚ್ಪಿಸಿಗಳು: ಬ್ಲೂ ಪೀಕ್ ಕ್ಯಾಪ್ ವಿತರಣೆ.
ಬಿಹಾರದ ಜನರು ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಮೊದಲ ಆದ್ಯತೆ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಮುಕ್ತಿ ದೊರೆಯಬೇಕೆಂದರೆ, ರಾಜ್ಯದಲ್ಲಿ ನಿರ್ಭೀತವಾದ ವಾತಾವರಣ ಸೃಷ್ಟಿಯಾಗಬೇಕೆಂದರೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕೆಂದು ತೇಜಸ್ವಿ ತಿಳಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಉದ್ಯೋಗದ ಭರವಸೆಯನ್ನು ತೇಜಸ್ವಿ ಪುನರುಚ್ಚರಿಸಿದ್ದಾರೆ.
.ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತೇನೆ: ಟ್ರಂಪ್ಗೆ ಜಪಾನ್ PM ಭರವಸೆ.ಚಿತ್ತಾಪುರ RSS ಪಥಸಂಚಲನ ಕಗ್ಗಂಟು: ಜಿಲ್ಲಾಡಳಿತದ ಸಭೆಯಲ್ಲಿ ಮೂಡದ ಒಮ್ಮತ?.
ಸರನ್ ಜಿಲ್ಲೆಯಲ್ಲಿ ಪ್ರತಿನಿತ್ಯ ಕೊಲೆ, ದರೋಡೆ, ಅಪಹರಣ ಹಾಗೂ ಲೂಟಿ ನೋಡುತ್ತಿದ್ದೇವೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಎಂದಿಗೂ ಸಂತ್ರಸ್ತರ ಪರವಾಗಿ ಧ್ವನಿಗೂಡಿಸುವುದಿಲ್ಲ. ಅವರು ನ್ಯಾಯ ಒದಗಿಸಲು ಆಸಕ್ತಿ ತೋರುವುದಿಲ್ಲ ಎಂದು ತೇಜಸ್ವಿ ವಾಗ್ದಾಳಿ ನಡೆಸಿದ್ದಾರೆ.

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.
.ಕರ್ನೂಲ್ ಬಸ್ ದುರಂತದ ಬಳಿಕ ಮತ್ತೊಂದು ಅವಘಡ: ಹೊತ್ತಿ ಉರಿದ ಬಸ್, ಇಬ್ಬರು ಸಾವು.ಕಸಾಪಗೆ ಆಡಳಿತಾಧಿಕಾರಿ ನೇಮಕ | KM ಗಾಯತ್ರಿ ಅಧಿಕಾರ ಸ್ವೀಕಾರ: ಜೋಶಿಗೆ ಹಿನ್ನಡೆ.ಕಿಚ್ಚ ಸುದೀಪ್ ಕಡೆಯಿಂದ ಗಿಲ್ಲಿ ನಟಗೆ ವಿಶೇಷ ಉಡುಗೊರೆ: ಆ ಪೆಟ್ಟಿಗೆಯಲ್ಲಿ ಏನಿದೆ?.ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್ಎಐ: ನ. 4ರಿಂದ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.