ಪಟ್ನಾ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಬುಧವಾರ ವಿಚಾರಣೆಗೆ ಹಾಜರಾದರು. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಲಾಲು ಪ್ರಸಾದ್ ವಿರುದ್ಧ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ.

ಲಾಲು ಪ್ರಸಾದ್ ಅವರನ್ನು ಇ.ಡಿ ಅಧಿಕಾರಿಗಳು ನಾಲ್ಕು ತಾಸುಗಳ ವರೆಗೆ ಪ್ರಶ್ನೋತ್ತರ ನಡೆಸಿದರು. ಇ.ಡಿ ಕಚೇರಿಯ ಮುಂದೆ ಆರ್ಜೆಡಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಲಾಲು ಅವರ ಪರವಾಗಿ ಜಯಘೋಷಗಳನ್ನು ಕೂಗಿದರು.

ಮಗಳು, ಸಂಸದೆ ಮಿಸಾ ಭಾರತಿ ಅವರೊಂದಿಗೆ ಲಾಲು ಬಂದಿದ್ದರು. ಪ್ರಶ್ನೋತ್ತರ ಎದುರಿಸಿದ ಬಳಿಕ ಲಾಲು ಅವರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜ್ ಪ್ರತಾಪ್ ಅವರು ಮಂಗಳವಾರ ಇ.ಡಿ ಮುಂದೆ ಹಾಜರಾಗಿದ್ದರು.

ದೆಹಲಿ ಚುನಾವಣೆ ಮುಗಿದ ಬಳಿಕವೇ ನಾನು ಹೇಳಿದ್ದೆ ಈಗ ಎಲ್ಲ ತನಿಖಾ ಸಂಸ್ಥೆಗಳು ಬಿಹಾರಕ್ಕೆ ದೌಡಾಯಿಸುತ್ತವೆ ಎಂಬುದಾಗಿ
ತೇಜಸ್ವಿ ಯಾದವ್ ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.