‘ವಲಸಿಗ ಮುದ್ರೆಯೊತ್ತುವ ಆತಂಕ’
ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೊಳಿಸುವುದರ ಭಾಗವಾಗಿಯೇ ‘ಎಸ್‌ಐಆರ್’ ನಡೆಯುತ್ತಿದೆ ಎಂಬ ಭಾವನೆ ಅಲ್ಪಸಂಖ್ಯಾತರಲ್ಲಿ ಬಲವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ಅಧಿಕಾರಿಗಳು ಅಕ್ರಮ ಬಾಂಗ್ಲಾ ವಲಸಿಗರು ಎಂದು ಮುದ್ರೆಯೊತ್ತುವ ಆತಂಕವೂ ಅವರಲ್ಲಿದೆ ಎಂದು ಪೂರ್ಣಿಯಾ ಜಿಲ್ಲೆಯ ಸಂಯುಕ್ತ ಜನತಾ ದಳದ ಮುಖಂಡರೊಬ್ಬರು ಹೇಳಿದರು.