ಹೈದರಾಬಾದ್: ವಿಪಕ್ಷಗಳು ವಿಫಲವಾಗಿರುವುದರಿಂದ ಬಿಜೆಪಿಯು ನಿರಂತರವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಒವೈಸಿ, ‘ಬಿಜೆಪಿಯು ಹಿಂದೂ ಮತಗಳನ್ನು ಕ್ರೋಢಿಕರಿಸಿಕೊಂಡಿದೆ. ಅದರ ಬಳಿ ಬಹುತೇಕ ಶೇ50ರಷ್ಟು ಹಿಂದೂ ಮತಗಳಿವೆ. ಹೀಗಾಗಿ ಅದು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ’ ಎಂದಿದ್ದಾರೆ.

ಅಲ್ಲದೇ ‘ನಮ್ಮ ಪಕ್ಷವು ಹೆಚ್ಚಿನ ಪ್ರಮಾಣದ ಮುಸಲ್ಮಾನರ ಮತಗಳನ್ನು ಒಳಗೊಂಡಿದೆ. ಹೀಗಾಗಿ ನಮ್ಮ ಮೇಲಿನ ದ್ವೇಷದಿಂದಾಗಿ ಇತರ ವಿಪಕ್ಷಗಳು ನನ್ನನ್ನು ದೂಷಿಸುವ ಮತ್ತು ಬಿಜೆಪಿಯ ‘ಬೀ ಟೀಮ್’ ಎಂದು ಕರೆಯುವ ಪ್ರಯತ್ನ ಮಾಡುತ್ತಿವೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಸ್ಲಿಮರ ಮತಗಳನ್ನು ಲಘುವಾಗಿ ಪರಿಗಣಿಸಿರುವ ವಿಪಕ್ಷಗಳು, ಅವರ ಬಗ್ಗೆ ಗಮನ ಕೊಡುತ್ತಿಲ್ಲ. ಸಮಾಜದ ಪ್ರತಿಯೊಂದು ವರ್ಗವು ರಾಜಕೀಯ ನಾಯಕತ್ವ ಹೊಂದುವುದು ಸ್ವೀಕಾರಾರ್ಹವಾಗಿದೆ. ಆದರೆ ಮುಸ್ಲಿಮರು ರಾಜಕೀಯ ಧ್ವನಿ, ನಾಯಕತ್ವ ಹೊಂದಿರುವುದು ಬಿಎಸ್ಪಿ, ಎಸ್ಪಿ ಹಾಗೂ ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಗೆ ಬೇಡವಾಗಿದೆ. ಯಾದವ ನಾಯಕನಾಗುತ್ತಾನೆ. ಮುಸಲ್ಮಾನ ಭಿಕ್ಷುಕನಾಗುತ್ತಾನೆ. ಇದು ಯಾವ ನ್ಯಾಯ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.