ಗುರುದಾಸ್ಪುರ (ಪಂಜಾಬ್): ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದತ್ತ ಬರುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಂಜಾಬ್ನ ಗುರುದಾಸ್ಪುರ ಸೆಕ್ಟರ್ನಲ್ಲಿ ಹೊಡೆದುರುಳಿಸಿದೆ.

ಗಸ್ತು ಕರ್ತವ್ಯದಲ್ಲಿದ್ದ ಬಿಎಸ್ಎಫ್ ಯೋಧರು ಇಂದು ಬೆಳಗಿನ ಜಾವ 4.35ರ ಸುಮಾರಿಗೆ ಡ್ರೋನ್ ಅನ್ನು ಗುರುತಿಸಿ, ತಕ್ಷಣ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರೋನ್ ಕಂಡುಬಂದಿದ್ದ ಪ್ರದೇಶದಲ್ಲಿ ಬಿಎಸ್ಎಫ್ ಡಿಐಜಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡ್ರೋನ್ನಲ್ಲಿ ಪಾಕಿಸ್ತಾನದಿಂದ ಸರಕು ಸಾಗಣೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ.

‘ಪಾಕ್ ಕಡೆಯಿಂದ ಭಾರತದತ್ತ ಬರುತ್ತಿದ್ದ ಡ್ರೋನ್ ಅನ್ನು ನಮ್ಮ ಯೋಧರು ಗುರುತಿಸಿದ್ದಾರೆ. ಡ್ರೋನ್ ಭಾರತವನ್ನು ಪ್ರವೇಶಿಸಿದ ತಕ್ಷಣ, ಅದರ ಮೇಲೆ 17 ಸುತ್ತು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಡ್ರೋನ್ನ ಒಂದು ಬ್ಲೇಡ್ಗೆ ಹಾನಿಯಾಗಿದೆ. ಇಡೀ ಪ್ರದೇಶವನ್ನು ಡ್ರೋನ್ ಕಣ್ಗಾವಲಿನಲ್ಲಿ ಶೋಧ ನಡೆಸಲಾಗುತ್ತಿದೆ’ ಎಂದು ಬಿಎಸ್ಎಫ್ ಡಿಐಜಿ ಪ್ರಭಾಕರ್ ಜೋಶಿ ಹೇಳಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದಿಂದ 191 ಡ್ರೋನ್ಗಳು ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿವೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ. ಇದು ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಪ್ರಮುಖ ಕಳವಳ ಹುಟ್ಟುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.