ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಂದು ಕೋಲ್ಕತ್ತದಲ್ಲಿ ಟಿಎಂಸಿ ರ್‍ಯಾಲಿ: ಕೋರ್ಟ್‌ ಅನುಮತಿ

Published 18 ಜನವರಿ 2024, 15:20 IST
Last Updated 18 ಜನವರಿ 2024, 15:20 IST
ಅಕ್ಷರ ಗಾತ್ರ

ಕೋಲ್ಕತ್ತ : ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷವು ಈ ತಿಂಗಳ 22ರಂದು ಇಲ್ಲಿ ಸೌಹಾರ್ದ ರ್‍ಯಾಲಿ ನಡೆಸಲು ಕಲ್ಕತ್ತ ಹೈಕೋರ್ಟ್‌ ಗುರುವಾರ ಅನುಮತಿ ನೀಡಿದೆ. 

ರ್‍ಯಾಲಿ ನಡೆಯುವ ವೇಳೆ ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನವೇ ಈ ರ್‍ಯಾಲಿ ನಡೆಯಲಿದೆ. 

ಅಂದು ರಾಜ್ಯದಲ್ಲಿ ಅರೆಸೇನಾಪಡೆ ನಿಯೋಜಿಸುವಂತೆ ಬಿಜೆಪಿ ಶಾಸಕ, ಅರ್ಜಿದಾರ ಸುವೇಂದು ಅಧಿಕಾರಿ ಅವರು ಮಾಡಿದ ಮನವಿ ಕುರಿತು ಕೋರ್ಟ್‌ ಯಾವುದೇ ಆದೇಶ ನೀಡಲಿಲ್ಲ.

ಜ. 22ರಂದು ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ನಗರದಲ್ಲಿ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ 35 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿ ಅವರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT