ನವದೆಹಲಿ (ಪಿಟಿಐ): ಜಿ20 ರಾಷ್ಟ್ರಗಳ ಸಂಸತ್ ಸ್ಪೀಕರ್‌ಗಳ ಶೃಂಗಸಭೆ ಗುರುವಾರ ಆರಂಭವಾಗಿದ್ದು, ಕೆನಡಾ ಸೆನೆಟ್‌ನ ಸ್ಪೀಕರ್ ರೇಮಂಡೆ ಗಗ್ನೆ ಅವರು ಹಾಜರಾಗದಿರಲು ನಿರ್ಧರಿಸಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸ್ಪೀಕರ್‌ಗಳ ಶೃಂಗದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಅವರು ಈ ಹಿಂದೆ ಖಚಿತಪಡಿಸಿದ್ದರು.

‘ಕೆನಡಾ ಸ್ಪೀಕರ್ ಶೃಂಗಕ್ಕೆ ಹಾಜರಾಗುತ್ತಿಲ್ಲ. ವೇಳಾಪಟ್ಟಿಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ’ ಎಂದು ಅವರು ಸಂಸತ್ತಿನ ಮೂಲಗಳು ತಿಳಿಸಿವೆ.

ರೇಮಂಡೆ ಗಗ್ನೆ ಅವರೊಂದಿಗೆ ನಡೆದ ಅನೌಪಚಾರಿಕ ಮಾತುಕತೆ ವೇಳೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದರು. ಈ ಆರೋಪಗಳನ್ನು ಭಾರತ ತಳ್ಳಿಹಾಕಿತ್ತು. ನಂತರ, ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.