ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ: ಕಂದಾಯ ನಿರ್ದೇಶನಾಲಯದ ಎಡಿಜಿ ಸಿಬಿಐ ಬಲೆಗೆ

Last Updated 1 ಜನವರಿ 2020, 11:39 IST
ಅಕ್ಷರ ಗಾತ್ರ

ನವದೆಹಲಿ: ಭಾರಿ ಮೊತ್ತದ ಲಂಚ ಸ್ವೀಕರಿಸುತ್ತಿದ್ದ ಕೇಂದ್ರ ಕಂದಾಯ ನಿರ್ದೇಶನಾಲಯದ ಗುಪ್ತಚರ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರೊಬ್ಬರು ಹಾಗೂ ಮಧ್ಯವರ್ತಿಯೊಬ್ಬ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಸಿಬಿಐ ಅಧಿಕಾರಿಗಳು ಕಂದಾಯ ನಿರ್ದೇಶನಾಲಯದ ಲುದಿಯಾನ, ನೊಯ್ಡಾ ಹಾಗೂ ದೆಹಲಿಗಳಲ್ಲಿ ಶೋಧ ನಡೆಸುತ್ತಿದ್ದಾಗ ಉನ್ನತ ಹುದ್ದೆಯಲ್ಲಿದ್ದ ಈ ಅಧಿಕಾರಿ ಮಧ್ಯವರ್ತಿಯಿಂದ₹25 ಲಕ್ಷ ಸ್ವೀಕರಿಸುತ್ತಿದ್ದರು. ಈ ಸಮಯದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಈ ಅಧಿಕಾರಿಗೆ ಮಧ್ಯವರ್ತಿಯಾಗಿದ್ದ ಮತ್ತೊಬ್ಬನನ್ನು ಸಿಬಿಐ ಬಂಧಿಸಿದೆ ಎಂದು ಎಎನ್ ಐ ವರದಿ ಮಾಡಿದೆ.

ಕಂದಾಯ ನಿರ್ದೇಶನಾಲಯದ ಅಧಿಕಾರಿ ಲುದಿಯಾನದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT