ನವದೆಹಲಿ: ಸಿಬಿಎಸ್‌ಇ ಮಂಗಳವಾರ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪರೀಕ್ಷೆಗಳು ಮೇ 4ರಂದು ಆರಂಭವಾಗಲಿವೆ. ಈ ಪ್ರಕಾರ, 10ನೇ ತರಗತಿ ಪರೀಕ್ಷೆಗಳು ಜೂನ್ 7 ಮತ್ತು 12ನೇ ತರಗತಿ ಪರೀಕ್ಷೆಗಳು ಜೂನ್ 10ರಂದು ಅಂತ್ಯವಾಗಲಿವೆ.

ಸಾಮಾನ್ಯವಾಗಿ ಪ್ರಾಯೋಗಿಕ ಪರೀಕ್ಷೆಗಳು ಜನವರಿ ತಿಂಗಳಲ್ಲಿ ನಡೆಯುತ್ತಿತ್ತು. ಲಿಖಿತ ಪರೀಕ್ಷೆಗಳು ಫೆಬ್ರುವರಿ ತಿಂಗಳಲ್ಲಿ ಆರಂಭವಾಗಿ, ಮಾರ್ಚ್ ತಿಂಗಳಲ್ಲಿ ಪೂರ್ಣಗೊಳುತ್ತಿದ್ದವು. ಕೋವಿಡ್‌ನಿಂದ ಉದ್ಭವಿಸಿದ ಪರಿಸ್ಥಿತಿಯಿಂದಾಗಿ ಈ ಶೈಕ್ಷಣಿಕ ವರ್ಷ ಪರೀಕ್ಷೆಗಳು ವಿಳಂಬವಾಗಿವೆ.

12ನೇ ತರಗತಿ ಪರೀಕ್ಷೆಗಳು ಎರಡು ಪಾಳಿಯಲ್ಲಿ ನಡೆಯಲಿವೆ. ಬೆಳಗಿನ ಪಾಳಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30, ಮಧ್ಯಾಹ್ನದ ಪಾಳಿ 2.30 ರಿಂದ ಸಂಜೆ 5.30ರವರೆಗೂ ನಡೆಯಲಿದೆ.

‘2020ರಲ್ಲಿ ಪರೀಕ್ಷೆಯ ಅವಧಿ 45 ದಿನಗಳಾಗಿತ್ತು. ಈ ವರ್ಷ ಅದನ್ನು 39ಕ್ಕೆ ಇಳಿಸಲಾಗುವುದು. ಎರಡನೇ ಪಾಳಿಯಲ್ಲಿ ವಿದೇಶದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳದ ವಿಷಯಗಳ ಪರೀಕ್ಷೆ ನಡೆಯಲಿವೆ’ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಂಜಯಂ ಭಾರದ್ವಾಜ್ ತಿಳಿಸಿದರು.

ಎರಡೂ ತರಗತಿಗಳಲ್ಲಿ ಪ್ರಮುಖ ವಿಷಯಗಳಿಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ನೀಡಲಾಗಿದೆ. ಇದು, ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ತಗ್ಗಿಸಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.