ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ: ಟ್ರಸ್ಟ್‌

Published 26 ಮೇ 2024, 7:52 IST
Last Updated 26 ಮೇ 2024, 7:52 IST
ಅಕ್ಷರ ಗಾತ್ರ

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ಶನಿವಾರ ಆದೇಶ ಹೊರಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟಿ ಅನಿಲ್‌ ಮಿಶ್ರಾ, 'ಎಲ್ಲಾ ಭಕ್ತರು ಈ ನಿರ್ಧಾರವನ್ನು ಗೌರವಿಸಬೇಕು, ಮೊಬೈಲ್‌ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಇಡಲು ಲಾಕರ್‌ ರೂಮ್‌ ಸೌಲಭ್ಯವಿದೆ. ಅದನ್ನು ಎಲ್ಲಾ ಭಕ್ತರು ಬಳಸಿಕೊಂಡು, ದೇವಾಲಯದಲ್ಲಿ ಸುವ್ಯವಸ್ಥೆ ಕಾಪಾಡಬೇಕು' ಎಂದು ಮನವಿ ಮಾಡಿದರು.

ಜನಸಾಮಾನ್ಯರು ಮಾತ್ರವಲ್ಲದೆ ವಿಐಪಿಗಳೂ ಕೂಡ ದೇವಾಲಯದ ಆವರಣದಲ್ಲಿ ಮೊಬೈಲ್‌ ಫೋನ್‌ ಬಳಸುವಂತಿಲ್ಲ ಎಂದು ಹೇಳಲಾಗಿದೆ.

ಈ ನಿಯಮ ಶನಿವಾರ (ಮೇ 25)ದಿಂದಲೇ ಅನ್ವಯವಾಗಲಿದೆ ಎಂದು ಟ್ರಸ್ಟ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT