ನವದೆಹಲಿ: 64 ವರ್ಷಗಳ ನಂತರ, ಏಪ್ರಿಲ್ 8 ಹಾಗೂ 9ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನ ನಡೆಯಲಿದೆ.

ಈ ಹಿಂದೆ ಅಹಮದಾಬಾದ್ನಲ್ಲಿ 1902 ಹಾಗೂ 1921ರಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಸ್ವಾತಂತ್ರ್ಯ ನಂತರ, 1961ರ ಜನವರಿ 6 ಮತ್ತು 7ರಂದು ಭಾವನಗರದಲ್ಲಿ ನಡೆದಿತ್ತು. ಇದಾದ ನಂತರ, ಈಗ ಮತ್ತೆ ಪಕ್ಷವು ಗುಜರಾತ್ನಲ್ಲಿ ಅಧಿವೇಶನ ಆಯೋಜಿಸಿರುವುದು ಗಮನಾರ್ಹ.

1907ರಲ್ಲಿ ಸೂರತ್ ಹಾಗೂ 1938ರಲ್ಲಿ ಹರಿಪುರದಲ್ಲಿ ಸೇರಿ ಈ ವರೆಗೆ ಗುಜರಾತ್ನಲ್ಲಿ ಐದು ಅಧಿವೇಶನಗಳು ನಡೆದಿವೆ. ಈ ಹಿಂದೆ ನಡೆದ ಅಧಿವೇಶನಗಳನ್ನು ಅವಲೋಕಿಸಿದಾಗ, ಹಲವು ಮಹತ್ವದ ಬೆಳವಣಿಗೆಗಳು, ತೀರ್ಮಾನಗಳು ಹೊರಹೊಮ್ಮಿರುವುದು ಕಂಡುಬರುತ್ತದೆ.

ಅಹಮದಾಬಾದ್ನಲ್ಲಿ 1902ರ ಡಿಸೆಂಬರ್ 23ರಿಂದ 26ರ ವರೆಗೆ ಮೊದಲ ಅಧಿವೇಶನ ನಡೆದಿತ್ತು. ಸುರೇಂದ್ರ ನಾಥ್ ಬ್ಯಾನರ್ಜಿ ಆಗ ಎಐಸಿಸಿ ಅಧ್ಯಕ್ಷರಾಗಿದ್ದರು ಹಾಗೂ 471 ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದರು.

ದೇಶದಲ್ಲಿ ತನ್ನ ಸೇನೆ ನಿಯೋಜನೆ ಮಾಡಿದ್ದಕ್ಕಾಗಿ ಶುಲ್ಕ ರೂಪದಲ್ಲಿ ಭಾರತಕ್ಕೆ ವಾರ್ಷಿಕ ₹7.86 ಲಕ್ಷ ಆಕರಣೆ ಮಾಡುವ ಬ್ರಿಟಿಷ್ ಸರ್ಕಾರದ ನಿರ್ಧಾರ ಕುರಿತು ಅಂದಿನ ಅಧಿವೇಶನದಲ್ಲಿ ಚರ್ಚೆಯಾಗಿತ್ತಲ್ಲದೇ, ಪಕ್ಷವು ಭಾರಿ ವಿರೋಧ ವ್ಯಕ್ತಪಡಿಸಿತ್ತು.

ನಂತರ, ಸೂರತ್ನಲ್ಲಿ 1907ರ ಡಿಸೆಂಬರ್ 26 ಹಾಗೂ 27ರಂದು ನಡೆದ ಅಧಿವೇಶನ ಕೂಡ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟ ಕುರಿತ ಚರ್ಚೆ ವೇಳೆ, ಪಕ್ಷದಲ್ಲಿನ ಮಂದಗಾಮಿಗಳು ಹಾಗೂ ತೀವ್ರಗಾಮಿಗಳ ನಡುವೆ ಜಟಾಪಟಿ ನಡೆದಿತ್ತು. ರಾಶ್ ಬಿಹಾರಿ ಘೋಷ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ಬಾಲ ಗಂಗಾಧರ ತಿಲಕರು ಪ್ರಶ್ನಿಸಿದ್ದರು. ಪ್ರತಿನಿಧಿಗಳು ಬಡಿಗೆಗಳನ್ನು ಹಿಡಿದು ಗದ್ದಲ ಶುರು ಮಾಡಿದ್ದರಿಂದ ಅಧಿವೇಶನ ಗೊಂದಲದ ಗೂಡಾಗಿತ್ತು. ಒಂದು ಹಂತದಲ್ಲಿ, ವೇದಿಕೆಯತ್ತ ಎಸೆಯಲಾದ ಶೂವೊಂದು ಬ್ಯಾನರ್ಜಿ ಹಾಗೂ ಫಿರೋಜ್ ಶಾ ಮೆಹ್ತಾ ಅವರಿಗೆ ಬಡಿದು ಗದ್ದಲ ಜೋರಾಗಿತ್ತಲ್ಲದೇ, ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು.

ಪಕ್ಷದ ಅಧ್ಯಕ್ಷ ಸಿ.ಆರ್.ದಾಸ್ ಅವರು ಜೈಲಿನಲ್ಲಿದ್ದರು. ಆ ವೇಳೆ, ಅಸಹಕಾರ ಚಳವಳಿ ಕಾವು ಏರತೊಡಗಿತ್ತು. ತಮ್ಮ ಬೇಡಿಕೆಗಳನ್ನು ಬ್ರಿಟಿಷ್ ಸರ್ಕಾರ ಈಡೇರಿಸಿದ್ದರೆ ಅಸಹಕಾರ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಸಜ್ಜಾಗಿತ್ತು. ಇಂತಹ ಸಂಘರ್ಷಮಯ ಸಂದರ್ಭದಲ್ಲಿ, 1921ರಲ್ಲಿ ಅಹಮದಾಬಾದ್ನಲ್ಲಿ ಹಕೀಂ ಅಜ್ಮಲ್ ಶಾ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದಿತ್ತು.

ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಆಗ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಪಕ್ಷದ ಮುಂದಿನ ನಡೆಗಳು ಹಾಗೂ ಉತ್ತರಾಧಿಕಾರಿಯೊಬ್ಬರ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಅಂದಿನ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರಿಗೆ ನೀಡಲಾಗಿತ್ತು.

1938ರ ಫೆಬ್ರುವರಿ 19ರಿಂದ 21ರವರೆಗೆ ಹರಿಪುರದಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಸುಭಾಶ್ಚಂದ್ರ ಬೋಸ್ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ‘ಪೂರ್ಣ ಸ್ವರಾಜ್’ ಬೇಡಿಕೆಯನ್ನು ಪಕ್ಷ ಪುನರುಚ್ಚರಿಸಿತ್ತು.

1939ರಲ್ಲಿ ಬೋಸ್ ಅವರು ಪಕ್ಷದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದರು. ಆದರೆ, ಅವರ ಆಯ್ಕೆಗೆ ಗಾಂಧೀಜಿ ವಿರೋಧ ವ್ಯಕ್ತಪಡಿಸಿದ ಕಾರಣ, ಬೋಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

331 ಮತ ಪಡೆದಿದ್ದ ಇಂದಿರಾ ಗಾಂಧಿ

1961ರಲ್ಲಿ ಭಾವನಗರದಲ್ಲಿ ಮಹಾಧಿವೇಶನ ನಡೆದಿತ್ತು. ಗುಜರಾತ್ ರಾಜ್ಯ ರಚನೆಯಾಗಿ ಒಂದು ವರ್ಷವೂ ಕಳೆದಿರಲಿಲ್ಲ. ಆಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ನಾಯಕರು ಸ್ಪರ್ಧಿಸಿದ್ದರು. ಇಂದಿರಾ ಗಾಂಧಿ ಅವರು ಗರಿಷ್ಠ 331 ಮತಗಳನ್ನು ಪಡೆದರೆ ವೈ.ಬಿ.ಚವಾಣ್ ಅವರು 250 ಮತಗಳನ್ನು ಪಡೆದಿದ್ದರು.

ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ‘ದೇಶದ ಜನರು ರಾಜಕೀಯ ‘ಸ್ವರಾಜ್’ ಪಡೆದಿದ್ದು ‘ಆರ್ಥಿಕ ಸ್ವರಾಜ್’ ಸಾಧಿಸಲು ಶ್ರಮಿಸಬೇಕು’ ಎಂದು ಹೇಳಿದ್ದರು. ‘ರಾಷ್ಟ್ರೀಯ ಏಕತೆ’ ಕುರಿತ ನಿರ್ಣಯ ಮಂಡಿಸಿ ಮಾತನಾಡಿದ್ದ ಇಂದಿರಾ ಗಾಂಧಿ ಅವರು ‘ವಿವಿಧತೆಯಲ್ಲಿ ಏಕತೆ ಈಗ ಅಪಾಯದಲ್ಲಿದೆ. ಕೋಮುವಾದ ಹಾಗೂ ಭಾಷಾ ದುರಭಿಮಾನ ಹೆಚ್ಚುತ್ತಿದೆ. ಇವುಗಳನ್ನು ಚಿವುಟಿ ಹಾಕದಿದ್ದರೆ ಭಾರಿ ಅಪಾಯ ತಪ್ಪಿದ್ದಲ್ಲ’ ಎಂದು ಎಚ್ಚರಿಸಿದ್ದರು.

3ನೇ ಪಂಚ ವಾರ್ಷಿಕ ಯೋಜನೆ ಪಂಜಾಯತ್ ರಾಜ್ ರಾಷ್ಟ್ರೀಯ ಏಕತೆ ಹಾಗೂ ಚುನಾವಣಾ ಪ್ರಣಾಳಿಕೆ ಕುರಿತು ಈ ಮಹಾಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.