ನವದೆಹಲಿ: ಪತ್ನಿ, ಮಗ ಮತ್ತು ನೆರೆಹೊರೆಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಯೋಧರೊಬ್ಬರಿಗೆ ಉತ್ತರ ಪ್ರದೇಶದ ಅಲಿಗಢದ ನ್ಯಾಯಾಲಯವು ಇಂದು (ಭಾನುವಾರ) ಮರಣದಂಡನೆ ವಿಧಿಸಿದೆ.

2014ರ ಜುಲೈ 12ರಂದು ನಡೆದಿದ್ದ ಹತ್ಯೆ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧನ ಮಗಳು, ಇದೀಗ ತನ್ನ ತಂದೆಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಾರೆ ಎಂದು ವರದಿಯಾಗಿದೆ.

50 ವರ್ಷದ ಮನೋಜ್ ಕುಮಾರ್ ಅವರು ಪತ್ನಿ ಸೀಮಾ ದೇವಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದೇ ವೇಳೆ ಕೋಪಗೊಂಡಿದ್ದ ಕುಮಾರ್, ತನ್ನ ಬಂದೂಕಿನಿಂದ ಪತ್ನಿ ಹಾಗೂ ಆರು ವರ್ಷದ ಮಗ ಮನ್ವೇಂದ್ರ ಮೇಲೆ ಗುಂಡು ಹಾರಿಸಿದ್ದರು. ಗಲಾಟೆ ತಡೆಯಲು ಬಂದಿದ್ದ ನೆರೆಮನೆಯ ಶಶಿಬಾಲಾ ಎಂಬುವವರ ಮೇಲೆಯೂ ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಸೀಮಾ ದೇವಿ ಅವರ ಸಹೋದರ ದಿಲೀಪ್, ಮನೋಜ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮನೋಜ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.